ಉಡುಪಿ:  ಅನಿಲ್‌ ಡಿಸೋಜ (ಪ್ಯಾರಿಸ್‌ ಪ್ರಿಸ್ಟ್‌, ಉದ್ಯಾವರ) ಅವರ ಸಹೋದರ ಶರಣ್ ಡೊಮಿನಿಕ್ ಡಿಸೋಜ ಅವರು ಇಂದು ಅಬುದಾಬಿಯಲ್ಲಿ ಇಂದು ನಿಧನ ಹೊಂದಿದ್ದಾರೆ. ಅವರು ಎಸ್‌ಜೆಕೆಸಿ ಅಬುಧಾಬಿಯ ಸಕ್ರಿಯ ಸಮಿತಿ ಸದಸ್ಯರಾಗಿದ್ದರು.

ಡಿಸೋಜ ಅವರು ಏಪ್ರೀಲ್‌ 2, 1967 ರಂದು ಜನಿಸಿದ್ದರು. ಪತ್ನಿ  ಎಲ್ವೀರ ಡಿಸೋಜಾ , ಸೆಲ್ವಿನ್ ಮತ್ತು ಶೆರ್ಲಿನ್ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ .ಫಾದರ್ ಡೆನಿಸ್ ಡಿಸೋಜ ಅವರು ಈ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಕುಟುಂಬದ ಸದಸ್ಯರಿಗೆ, ವಿಶೇಷವಾಗಿ ನಮ್ಮ ಸಹೋದರ ಧರ್ಮಗುರು ಫಾದರ್ ಅನಿಲ್ ಡಿಸೋಜಾ ಅವರಿಗೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಆತ್ಮೀಯ ಫಾ.ಅನಿಲ್ ನಮ್ಮ ಪ್ರಾರ್ಥನೆ ಮಾಡುತ್ತೇವೆ ಎಂದಿದ್ದಾರೆ