ಉಡುಪಿ: ಸಾರ್ವಜನಿಕವಾಗಿ ಆರ್ ಎಸ್ ಎಸ್ ಚಟುವಟಿಕೆ ನಿಷೇಧ ಪ್ರಿಯಾಂಕ ಖರ್ಗೆ ಪತ್ರ ವಿಚಾರವಾಗಿ ಉಡುಪಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.
ಆರ್ ಎಸ್ ಎಸ್ ಸಂಘಟನೆಗೆ 100 ವರ್ಷ ತುಂಬಿದೆ. ಸಂಘದ ಕಾರ್ಯಚಟುವಟಿಕೆಯನ್ನು ದೇಶವೇ ಮೆಚ್ಚಿದೆ. ನೆಹರು ಕಾಲದಲ್ಲಿ ಪರೇಡ್ ನಲ್ಲಿ ಆರ್ ಎಸ್ ಎಸ್ ಪಥಸಂಚಲ ಮಾಡಿದೆ. ಭಾರತವನ್ನು ಪ್ರೀತಿಸುವವರೆಲ್ಲರೂ ಹಿಂದುಗಳು ಅನ್ನುವುದು ಆರ್ ಎಸ್ ಎಸ್ ತತ್ವ ಎಂದರು.
ಹಿಂದೂ ಕ್ರೈಸ್ತ ಮುಸಲ್ಮಾನ ಎಂಬ ಭೇದ ಭಾವ ಆರ್ ಎಸ್ ಎಸ್ ಗೆ ಇಲ್ಲ, ವಾಜಪೇಯಿ, ಮೋದಿ ಆರ್ ಎಸ್ ಎಸ್ ಸಂಘಟನೆಯಿಂದ ಬಂದವರು, ಅವರ ಕೆಲಸವನ್ನು ದೇಶವೇ ಮೆಚ್ಚಿದೆ. ಪ್ರಿಯಾಂಕ ಖರ್ಗೆ ಅವರ ಈ ನಡೆಗೆ ನನ್ನ ವಿರೋಧವಿದೆ. ಆರ್ ಎಸ್ ಎಸ್ ಬೆಳೆದಷ್ಟು ರಾಷ್ಟ್ರಕ್ಕೆ ಒಳಿತು, ಕಾಂಗ್ರೆಸ್ ನಲ್ಲಿರುವ ಕೆಲ ವ್ಯಕ್ತಿಗಳಿಗೆ ಆರ್‌ಎಸ್‌ಎಸ್ ನ ಭಯ ಇದೆ ಎಂದರು.
ಆರ್ ಎಸ್ ಎಸ್ ರಾಷ್ಟ್ರ ವಿರೋಧಿ ಧರ್ಮವಿರೋಧಿ ಬೋಧನೆ ಮಾಡಿಲ್, ಆರ್ ಎಸ್ ಎಸ್ ಈ ರಾಷ್ಟ್ರದ ಹಿತ, ಡಿಕೆಶಿ ಕರಿ ಟೋಪಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಕರಿ ಟೋಪಿಯಲ್ಲ ಆರ್ ಎಸ್ ಎಸ್ ಸಂಘದ ಗಣವೇಷ, ಕರಿ ಟೋಪಿ ಎಂದು ಕರೆಯುವ ಸ್ವಭಾವ ಒಳ್ಳೆಯದಲ್ಲ ಎಂದರು.

