ಉಡುಪಿ: ಆರ್ ಎಸ್ ಎಸ್ ಸಾರ್ವಜನಿಕ ಚಟುವಟಿಕೆ ನಿಷೇಧಕ್ಕೆ ಪ್ರಿಯಾಂಕ ಖರ್ಗೆ ಪತ್ರ ವಿಚಾರವಾಗಿ ಶಾಸಕ ವಿ. ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಆರ್ ಎಸ್ ಎಸ್ ನಿಷೇಧ ಹೇಳಿಕೆ ನಾಚಿಕೆ ಸಂಗತಿ. ಪ್ರಿಯಾಂಕ ಖರ್ಗೆ ಅವಿವೇಕಿತನ ಪತ್ರ ಬರೆದಿದ್ದಾರೆ ಎಂದರು.
ಇವರ ತಂದೆ ಗೃಹಸಚಿವರವಾಗಿದ್ದಾಗಲೇ ಆರ್ ಎಸ್ ಎಸ್ ಅನ್ನು ಏನೂ ಮಾಡಲು ಆಗಿಲ್ಲ. ಅಧಿಕಾರದ ಮದ -ಸೊಕ್ಕಿನಿಂದ ಈರೀತಿಯ ಹೇಳಿಕೆ ಕೊಡುತ್ತಿದ್ದೀರಿ. ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರಾಗಿ ಬರಬಹುದು ಪದೇ ಪದೇ ದುರಹಂಕಾರದಿಂದ ಮಾತನಾಡಬೇಡಿ ಎಂದರು.
ಇದು ನಿಮ್ಮ ಬೆಳವಣಿಗೆಗೆ ಒಳ್ಳೆಯದಲ್ಲ. ನೀವು ನಿಮ್ಮ ಅಧಿಕಾರ ಶಾಶ್ವತ ಅಲ್ಲ ಆರ್ ಎಸ್ ಎಸ್ ವಿಚಾರ ಮಾತ್ರ ಶಾಶ್ವತ, ನೂರು ವರ್ಷ ಜನರ ನಡುವೆ ಕೆಲಸ ಮಾಡಿದೆ ಇನ್ನು ನೂರಾರು ವರ್ಷ ಕೆಲಸ ಮಾಡುತ್ತೆ, ನಮ್ಮಂತಹ ಲಕ್ಷಾಂತರ ಸ್ವಯಂ ಸೇವಕರು ಮುಂದಿನ ಪೀಳಿಗೆಯಲ್ಲೂ ಕೆಲಸ ಮಾಡುತ್ತಾರೆ.
ಎರಡುವರೆ ವರ್ಷ ಇಲಾಖೆಯಲ್ಲಿ ಕೇವಲ ಕತ್ತೆ ಕಾದಿದ್ದೀರಿ, ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ ಬಂದಾಗ ನಾಪತ್ತೆಯಾಗಿದ್ದೀರಿ, ನಾನು ಸಚಿವನಾಗಿ ಜೀವಂತನಾಗಿದ್ದೇನೆ ಎಂದು ತೋರಿಸಿಕೊಳ್ಳಲು ಹೇಳಿಕೆ ಕೊಡಬೇಡಿ. ಕರ್ನಾಟಕದಲ್ಲಿ ಕೆಟ್ಟ ಸರ್ಕಾರ ಇದೆ ಎಂದರು.
ಮುಖ್ಯಮಂತ್ರಿಗಳಿಗೆ ಸಂಪುಟದಲ್ಲಿ ಹಿಡಿತ ಇಲ್ಲ. ಯಾರು ಏನು ಬೇಕಾದರೂ ಮಾತನಾಡಬಹುದೆಂಬ ಪರಿಸ್ಥಿತಿ ಇದೆ. ದಿನಬೆಳಗಾದರೆ ಯಾರು ಮುಖ್ಯಮಂತ್ರಿ, ಯಾರು ಸಚಿವ ಅನ್ನೋದೆ ಚರ್ಚೆ, ಇದು 80℅ ಸರ್ಕಾರ. ತಾಕತ್ತಿದ್ದರೆ ಆರ್ ಎಸ್ ಎಸ್ ನಿಷೇದ ಮಾಡಿ ಚುನಾವಣೆಗೆ ಬನ್ನಿ ಎಂದರು.
ದೇಶಭಕ್ತ ಸಂಘಟನೆಯಾಗಿ ಆರ್ ಎಸ್ ಎಸ್ ವಿಶ್ವದ ಜನರ ಮನಸ್ಸು ಗೆದ್ದಿದೆ. ದೇಶಕ್ಕೆ ತನ್ನದೇ ಕೊಡುಗೆ ನೀಡಿದೆ. ಆರ್ ಎಸ್ ಎಸ್ ನ್ನ ಪ್ರಿಯಾಂಕ ಖರ್ಗೆವಿನಾಕಾರಣ ಟೀಕೆ ಮಾಡುತ್ತಿರುವುದು ಮೊದಲಲ್ಲ, ತನ್ನ ಅಧಿಕಾರ ಅವಧಿಯಲ್ಲಿ ಜನರಿಗೆ ಹತ್ತಿರವಾಗುವ ಯಾವುದೇ ಕೆಲಸ ಖರ್ಗೆ ಸಚಿವರಾಗಿ ಮಾಡಿಲ್ಲ. ಆರ್ ಎಸ್ ಎಸ್ ಟೀಕೆ ಮಾಡುವ ಮೂಲಕ ಜೀವಂತವಾಗಿದ್ದೇನೆ ಎಂದು ತೋರಿಸಲು ಹೊರಟಿದ್ದಾರೆ ಎಂದರು.
ಇಡೀ ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಈ ವೈಫಲ್ಯಕ್ಕೆ ಪ್ರಿಯಾಂಕ ಖರ್ಗೆ ಕಾರಣ. ಒಂದು ಹೊರ ರಸ್ತೆ ಮಾಡಿಲ್ಲ ರಸ್ತೆ ಗುಂಡಿ ಮುಚ್ಚಿಲ್ಲ ಒಂದೇ ಒಂದು ನಿವೇಷನ ಹಂಚಿಲ್ಲ. ಗ್ರಾಮ ಪಂಚಾಯತಿ ಗೆ ಅನುದಾನ ಕೊಟ್ಟಿಲ್ಲ. ಯಾವುದೇ ಜಿಲ್ಲೆಗೆ ಪ್ರವಾಸ ಮಾಡಿಲ್ಲ, ತನ್ನ ವೈಪಲ್ಯ ಮುಚ್ಚಿಹಾಕಲು ಮಾಧ್ಯಮದ ಮುಂದೆ ಮಾತನಾಡುವ ಚಟ ಎಂದರು.

