ಉಡುಪಿ: ನಗರದಲ್ಲಿ ನೆಲೆಸಿದ್ದ ಗಾಯಾಳು ಕಾಡುಬೆಕ್ಕನ್ನು ರಕ್ಷಿಸಿರುವ ಘಟನೆ ನಡೆದಿದೆ. ಬೀದಿ ನಾಯಿಗಳು ಕಾಡುಬೆಕ್ಕಿನ ಮೇಲೆ ಎರಗಿ ಗಾಯಗೊಳಿಸಿದರಿಂದ ಬೆಕ್ಕು ಅಸಹಾಯಕ ಸ್ಥಿತಿಯಲ್ಲಿತ್ತು.
ಪೊದೆಯೊಳಗೆ ಅಡಗಿಕೂತು ಪ್ರಾಣ ರಕ್ಷಿಸಿಕೊಂಡಿತ್ತು. ವಿಷಯ ತಿಳಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕಾಡುಬೆಕ್ಕನ್ನು ಹಿಡಿದು, ಪಶುವೈದ್ಯ ಡಾ. ಸಂದೀಪ್ ಶೆಟ್ಟಿ ಅವರಲ್ಲಿ ಚಿಕಿತ್ಸೆಗೆ ಒಳಪಡಿಸಿ, ಬಳಿಕ ಆದಿಉಡುಪಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

