ಉಡುಪಿ: ಜಿಲ್ಲೆಗೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಿನ್ನೆ ರಾತ್ರಿಯಿಂದಲೇ ಭಾರೀ ಮಳೆ ಸುರಿಯುತ್ತಿದೆ. ಜಿಲ್ಲೆಯ ವಿವಿಧಡೆಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ.
ಗಾಳಿಯ ವೇಗ ಹೆಚ್ಚುವ ಸಾಧ್ಯತೆ ಇದೆ. ಗಂಟೆಗೆ 40 ರಿಂದ 50 km ವರೆಗೂ ಗಾಳಿಯ ವೇಗ ಸಾಧ್ಯತೆ ಇದೆ. ನಿರಂತರ ಮಳೆ ಇಲ್ಲದ ಕಾರಣ, ತಗ್ಗು ಪ್ರದೇಶಗಳು ಸೇಫ್ ಆಗಿದೆ.
ನದಿ ಪಾತ್ರದ ಪ್ರದೇಶಗಳು ಮತ್ತು ಕಡಲ ತೀರದಲ್ಲಿ ಎಚ್ಚರಿಕೆ ನೀಡಲಾಗಿದೆ. ತಡವಾಗಿಯಾದರೂ ಉತ್ತಮ ಮಳೆಯ ನಿರೀಕ್ಷೆ ಇದೆ.

