ಉಡುಪಿ: ಬಿಗ್ ಬಾಸ್ ಕನ್ನಡ 12 ರನ್ನರ್ ಆಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ಉಡುಪಿಯ ಸಾಲಿಗ್ರಾಮದಲ್ಲಿರುವ ಹೊಸಬದುಕು ಆಶ್ರಮದಲ್ಲಿ ಆಚರಿಸಿ ಗಮನ ಸೆಳೆದರು. ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿದ ಅವರು ನಿವಾಸಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದು, ಅವರೊಂದಿಗೆ ಸಮಯ ಕಳೆಯುವ ಮೂಲಕ ಸಂತೋಷ ಹಂಚಿಕೊಂಡರು.

ಈ ವೇಳೆ ಆಶ್ರಮದ ನಿವಾಸಿಗಳು ಹಾಡು ಹಾಡಿದಾಗ ರಕ್ಷಿತಾ ಶೆಟ್ಟಿ ಅವರ ಜೊತೆಗೂಡಿ ಡ್ಯಾನ್ಸ್ ಮಾಡಿ ಎಲ್ಲರನ್ನೂ ರಂಜಿಸಿದರು. ಆಶ್ರಮದವರೊಂದಿಗೆ ಬೆರೆತು ಹಾಡಿಗೆ ಹೆಜ್ಜೆ ಹಾಕಿದ ರಕ್ಷಿತಾ ಶೆಟ್ಟಿ ಅವರ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆಶ್ರಮದ ನಿವಾಸಿಗಳೂ ಅವರೊಂದಿಗೆ ಸಂಭ್ರಮಿಸಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಕಾರ್ಯಕ್ರಮದ ವೇಳೆ ಆಶ್ರಮದ ಸದಸ್ಯರು ರಕ್ಷಿತಾ ಶೆಟ್ಟಿ ಅವರಿಗೆ ಶುಭಾಶಯ ತಿಳಿಸಿ ಕೃತಜ್ಞತೆ ವ್ಯಕ್ತಪಡಿಸಿದರು.

View this post on Instagram

A post shared by News Karnataka (@newskarnataka)