ಉಡುಪಿ: ಪ್ರಧಾನಿ ಮೋದಿಗೆ ಭಾರತ ಭಾಗ್ಯವಿಧಾತ ಬಿರುದು ನೀಡಿ ಉಡುಪಿ ಪುತ್ತಿಗೆ ಮಠ ಸನ್ಮಾನ ಮಾಡಿತು. ಸಾಮಾಜಿಕ ಜಾಲತಾಣದಲ್ಲಿ ಹೆಸರಿಗೆ ವಿರೋಧ ಚರ್ಚೆ ನಡೆಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಭಾರತದ ಭಾಗ್ಯವನ್ನು ಬೆಳಗಿದವರು, ವಕೀಲರ ಬಳಿಯು ಈ ಹೆಸರಿನ ಬಗ್ಗೆ ವಿಚಾರ ಮಾಡಿದ್ದೆವು, ನರೇಂದ್ರ ಮೋದಿ ಅವರಿಗೆ ಸರಿಯಾಗಿ ಅನ್ವಯವಾಗುತ್ತದೆ ಎಂದು ಈ ಬಿರುದು ಕೊಟ್ಟೆವು ಎಂದರು.
ರಾಮಮಂದಿರ ನಿರ್ಮಾಣ ಕಾಶ್ಮೀರದ ಸಮಸ್ಯೆ ಬಗೆಹರಿಸಿದ್ದು, ಉಗ್ರಗಾಮಿಗಳಿಗೆ ಪ್ರತ್ಯುತ್ತರ ದೇಶ ರಕ್ಷಣೆ ಆರ್ಥಿಕತೆಯ ವಿಚಾರವಾಗಿ, ದೇಶಕ್ಕೆ ಮೋದಿ ಅವರ ಕೊಡುಗೆ ಮಹತ್ವದ್ದು. ಭಾರತದ ಭಾಗ್ಯದ ಬಾಗಿಲನ್ನು ಮೋದಿ ತೆರೆದಿದ್ದಾರೆ ಎಂಬುದು ನಮ್ಮ ಭಾವನೆ. ವಿಶ್ವಮಟ್ಟದಲ್ಲೂ ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಮಿಂಚುತ್ತಿದ್ದಾರೆ.
ಭಾರತದ ಗೌರವ ಪ್ರಧಾನಿ ಮೋದಿ ಅವರಿಂದ ಹೆಚ್ಚಾಗಿದೆ. ನಾನು 25 ವರ್ಷಗಳಿಂದ ವಿಶ್ವ ಸಂಚಾರ ಮಾಡುತ್ತಿದ್ದೇನೆ. ಭಾರತವನ್ನು ನೋಡುವ ದೃಷ್ಟಿಯ ಬದಲಾಗಿದೆ. ಭಾರತದ ಘನತೆ ಪ್ರಧಾನಿ ಮೋದಿಯಿಂದ ಜಾಸ್ತಿ ಆಗಿದೆ. ಈ ಕಾರಣಕ್ಕೆ ಭಾರತ ಭಾಗ್ಯ ವಿಧಾತ ಹೆಸರನ್ನು ಆಯ್ಕೆ ಮಾಡಿದೆ ಎಂದರು.

