ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸಪ್ತೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ, ಶ್ರೀ ಕೃಷ್ಣ ಮಠದ ಗರ್ಭ ಗುಡಿಯ ಆವರಣದಲ್ಲಿ ಪಾರ್ಥ ಸಾರಥಿ ಸುವರ್ಣ ರಥದ ಪ್ರಥಮ ರಥೋತ್ಸವಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಚಾಲನೆಯನ್ನು ನೀಡಿದರು.

ಪುತ್ತಿಗೆ ಶ್ರೀಪಾದರ ಸಂಕಲ್ಪದಂತೆ ವೇಣುವಾದನದೊಂದಿಗೆ ಪಾರ್ಥ ಸಾರಥಿ ಸುವರ್ಣ ರಥದ ರಥೋತ್ಸವವು ಅತ್ಯಂತ ವೈಭವದಿಂದ ನಡೆಯಿತು.

ನಂತರ ಶಯನೋತ್ಸವವು ಜರುಗಿತು. ಶಯನೋತ್ಸವದಲ್ಲಿ ವಿಶೇಷವಾಗಿ ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶಂಖ ನಾದವನ್ನು ಮಾಡಿದರು.