ಉಡುಪಿ: ರಾಪಿಡೋ, ನಮ್ಮ ಯಾತ್ರಿ ಆಟೋಗಳಿಗೆ ಮಣಿಪಾಲದಲ್ಲಿ ವಿರೋಧ ವ್ಯಕ್ತವಾಗಿದ್ದು, ಮಣಿಪಾಲ ಠಾಣೆ ಮುಂಭಾಗದಲ್ಲಿ ಆಟೋ ಚಾಲಕರು ಜಮಾಯಿಸಿದ್ದಾರೆ. ಮಣಿಪಾಲ ನಗರದ 400ಕ್ಕೂ ಹೆಚ್ಚು ಆಟೋ ಚಾಲಕರಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ- ಆರ್‌ಟಿಓ ಕಚೇರಿ ಮುಂಭಾಗದಲ್ಲಿ  ಆಟೋ ಚಾಲಕರು ಜಮಾಯಿಸಿದರು. ಬಾಡಿಗೆ ಮಾಡುವುದನ್ನು ನಿಲ್ಲಿಸಿ ಏಕಾಏಕಿ ಪ್ರತಿಭಟನೆ ನಡೆಸಿದರು. ಉಡುಪಿಯಲ್ಲಿ ಆಟೋ ಚಾಲಕ ಮಾಲಕರ ಜಟಾಪಟಿ ನಿಲ್ಲಲಿಲ್ಲ. ಮುಂದುವರಿದ ವಲಯ 1-2 ಎಂಬ ವಿಚಾರದಲ್ಲೂ ಗಲಾಟೆ ನಡೆದಿದೆ.

ಆಟೋ ಯೂನಿಯನ್ ಗಳ ನಡುವೆ ಸಮನ್ವಯ ಸಾಧಿಸುವುದರಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ಡಿಸಿ, ಎಸ್ ಪಿ, ಶಾಸಕರು, ಆರ್ ಟಿ ಓ, ಯೂನಿಯನ್ ಸಭೆಗಳು ಹಲವು ಬಾರಿ ವಿಫಲವಾಗಿದೆ.  ಮಧ್ಯಸ್ಥಿಕೆ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಬಂದಿದ್ದಾರೆ.

ಮೊದಲು ನಿಮ್ಮ ಬಣಗಳ ಗಲಾಟೆ ಸರಿ ಮಾಡಿ ಎಂದು ಆಟೋ ಚಾಲಕರು ತಿರುಗೇಟು ನೀಡಿದರು. APP ಮೂಲಕ ಬುಕ್ಕಿಂಗೆ ಅವಕಾಶ ಕೊಡಬಾರದು ಎಂದು ಮಣಿಪಾಲ ಆಟೋ ಯೂನಿಯನ್ ಒತ್ತಾಯಿಸಿದ್ದಾರೆ. ದೇಶಾದ್ಯಂತ, ರಾಜ್ಯಾದ್ಯಂತ ಆಪ್ ಬಳಕೆ ಇದೆ. ಉಡುಪಿ ಮಣಿಪಾಲ ಇದರಿಂದ ಹೊರತಾಗಿದೆಯಾ ಎಂದು ಕೆಲ ಆಟೋ ಚಾಲಕರ ತಿರುಗೇಟು ನೀಡಿದರು.