ಉಡುಪಿ: ಕುಂದಾಪುರ ತಾಲೂಕಿನಲ್ಲಿ ಒಂಟಿಸಲಗ ಸೆರೆಗೆ ಸಿದ್ದಾಪುರ ಪರಿಸರದಲ್ಲಿ ಇತರ ಆನೆಗಳನ್ನು ಬಳಸಿಕೊಂಡು ಕಾರ್ಯಚರಣೆ ನಡೆಸಲಾಗುತ್ತಿದೆ. ಈಗಾಗಲೇ ಸಕ್ರೆಬೈಲಿನಿಂದ ಮೂರು ಆನೆಗಳನ್ನು ವನ್ಯಜೀವಿ ಇಲಾಖೆ ತರಿಸಿಕೊಂಡಿದೆ.
ಕಾರ್ಯಚರಣೆಗೆ ಬಾಲಚಂದ್ರ, ಸೋಮಣ್ಣ, ಬಹದ್ದೂರ್ ಆನೆಗಳು ಸಜ್ಜಾಗಿ ಬಂದಿದೆ. ಇಳಿ ಹೊತ್ತಿನಲ್ಲಿ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ. ಸಂಜೆಯಾಗುತ್ತಿದ್ದಂತೆ ಆನೆ ಮುಖ್ಯ ರಸ್ತೆಗೆ ಬಂದು ಅಡ್ಡಾಡುತ್ತಿರುತ್ತದೆ. ಹಗಲಲ್ಲಿ ಕಾಡಿನೊಳಗೆ ಆನೆ ಅವಿತ್ತಿರುತ್ತದೆ.
ಬಾಳೆಬರೆ ಘಾಟಿಯಿಂದ ಇಳಿದು ಕಳೆದ ಎರಡು ದಿನಗಳಿಂದ ಆನೆ ಇಲ್ಲೇ ತಂಗಿರುತ್ತದೆ. ಸಿದ್ದಾಪುರ , ಹೊಸಂಗಡಿ, ಕಮಲಶಿಲೆ ಪರಿಸರದಲ್ಲಿ ಒಂಟಿ ಸಲಗ ಅಡ್ಡಾಡುತ್ತಿರುತ್ತದೆ. ರೇಡಿಯೋ ಕಾಲರ್ ನೀಡುವ ಮಾಹಿತಿ ಅನುಸಾರ ಕಾರ್ಯಾಚರಣೆ ಆರಂಭಗೊಳ್ಳುತ್ತದೆ. ಎರಡು ದಿನಗಳಿಂದ ತಾಲೂಕು ಆಡಳಿತ ಪೇಟೆ ಬಂದ್ ಮಾಡಿ, ಶಾಲೆಗಳಿಗೆ ರಜೆ ಕೊಟ್ಟಿದೆ.

