ಉಡುಪಿ: ರಾಜ್ಯದ ರಾಜಕೀಯ ನಾಯಕರಿಗೆ ಹನಿ ಟ್ರ್ಯಾಪ್ ವಿಚಾರವಾಗಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ. ಹನಿ ಟ್ರ್ಯಾಪ್ ನಂತಹ ಪರಿಸ್ಥಿತಿ ಯಾರಿಗೂ ಬರೋದು ಬೇಡ. ಯಾರು ಕೂಡ ಹನಿ ಟ್ರ್ಯಾಪ್ ಗೆ ಸಿಕ್ಕಿಹಾಕಿಕೊಳ್ಳಬಾರದು ಎಂದರು.

ಹನಿಟ್ರ್ಯಾಪ್ ಮಾಡಬಾರದು ಟ್ರ್ಯಾಪ್ ಗೆ ಸಿಕ್ಕಿಹಾಕಿಕೊಳ್ಳಬಾರದು. ತನಿಖೆ ಮಾಡುತ್ತೇವೆ ಕ್ರಮ ಕೈಗೊಳ್ಳುತ್ತೇವೆಂದು ಸರ್ಕಾರ ಹೇಳಿದೆ. ಮುಖ್ಯಮಂತ್ರಿಗಳು ಭದ್ರತೆ ಕೊಡುವ ಭರವಸೆ ನೀಡಿದ್ದಾರೆ. ಯಾರು ಹನಿ ಟ್ರ್ಯಾಪ್ ಮಾಡಿದ್ದಾರೆ ಎಂದು ಗೊತ್ತಿದ್ದರೆ ಹೇಳಲಿ ಎಂದರು.

ನಮ್ಮ ಕಾಲ ನೆನಪಾಗುತ್ತದೆ. ಅದೊಂದು ಎಂತಹ ರಾಜಕೀಯ ಕಾಲ ಇತ್ತು, ಬದಲಾವಣೆ ನೋಡುವಾಗ ಬೇಸರವಾಗುತ್ತದೆ. ಜನಪ್ರತಿನಿಧಿಗಳ ಆಯ್ಕೆ ಮಾಡುವಾಗ ಜನರು ಎಚ್ಚೆತ್ತುಕೊಳ್ಳಬೇಕು.

ಟ್ರ್ಯಾಪ್ ಮಾಡಿದವರದ್ದು ತಪ್ಪಾ? ಟ್ರ್ಯಾಪ್ ಆದವರದ್ದು ತಪ್ಪಾ?, ನಾವೇ ಜಾಗೃತರಾಗಬೇಕು ಟೆಮ್ಟ್ ಆಗಬಾರದು. ಟೆರಿಬಲ್ ಈಸ್ ದಿ ಟೆಮ್ಟೇಷನ್ ಪ್ರಲೋಭನೆ ಎಂಬೂದು ಭಯಾನಕ ಎಂದರು.