ಉಡುಪಿ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಇವತ್ತು ಕೋರ್ಟ್ ಕೂಡ ದರ್ಶನ್ ಮನೆ ಊಟಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪೊಲೀಸರು ಕೊಲೆ ಪ್ರಕರಣದ ಚಾರ್ಜ್ಶೀಟ್ ರೆಡಿ ಮಾಡುತ್ತಿದ್ದಾರೆ.
ಕಾರಾಗೃಹದಲ್ಲಿ ದರ್ಶನ್ ಧ್ಯಾನ, ಪುಸ್ತಕಗಳ ಮೊರೆ ಹೋಗಿದ್ದು, ಗಂಡನ ಕಾಪಾಡಲು ಪತ್ನಿ ವಿಜಯಲಕ್ಷ್ಮಿ ಅವರು ಕೊಲ್ಲೂರಿಗೆ ತೆರಳಿದ್ದಾರೆ.ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿದ್ದಾರೆ. ಆಪ್ತರ ಜೊತೆ ಕೊಲ್ಲೂರಿಗೆ ಆಗಮಿಸಿರುವ ವಿಜಯಲಕ್ಷ್ಮಿ ಅವರು ಮೂಕಾಂಬಿಕಾ ದೇವಿಯ ವಿಶೇಷ ದರ್ಶನ ಪಡೆದಿದ್ದಾರೆ.
ದರ್ಶನ್ ಬಿಡುಗಡೆಗಾಗಿ ದೇವರ ಮೊರೆ ಹೋಗಿರುವ ವಿಜಯಲಕ್ಷ್ಮಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಂಕಲ್ಪ, ಪಾರಾಯಣ ಮಾಡುತ್ತಿದ್ದಾರೆ. ದೇವಸ್ಥಾನದಲ್ಲಿ ನಾಳೆ ಬೆಳಗ್ಗೆ ದರ್ಶನ್ಗಾಗಿ ನವ ಚಂಡಿಕಾಯಾಗ ಕೂಡ ನಡೆಯುತ್ತಿದೆ.

