ಉಡುಪಿ: ನರಕ ಚತುರ್ದಶಿಯ ಮುನ್ನಾದಿನ ಗ್ರಾಮದ ಯುವಕರು ಒಗ್ಗೂಡಿ ಊರಿನ ಸುತ್ತಮುತ್ತಲಿನ ಕಸಕಡ್ಡಿ, ಒಣಗಿದ ಕಟ್ಟಿಗೆ ಹಾಗೂ ಅನಗತ್ಯ ವಸ್ತುಗಳನ್ನು ಒಟ್ಟು ಸೇರಿಸುತ್ತಾರೆ. ಬಳಿಕ ನರಕ ಚತುರ್ದಶಿಯ ದಿನ ಸಂಪ್ರದಾಯದಂತೆ ಅವುಗಳಿಗೆ ಬೆಂಕಿ ಹಚ್ಚುವ ಮೂಲಕ ಮುಲ್ಲ ಮುಟ್ಟೆ ಆಚರಿಸುತ್ತಾರೆ.

ಇದು ಕೇವಲ ಕಸಕಡ್ಡಿಗಳಿಗೆ ಬೆಂಕಿ ಹಚ್ಚುವ ಆಚರಣೆಯಲ್ಲ.. ಗ್ರಾಮದ ಯುವಕರ ಒಗ್ಗಟ್ಟು, ಸಾಮೂಹಿಕ ಭಾಗವಹಿಸುವಿಕೆ ಮತ್ತು ತಲೆಮಾರುಗಳಿಂದ ಮುಂದುವರಿದು ಬಂದಿರುವ ಕರಾವಳಿಯ ಗ್ರಾಮೀಣ ಸಂಸ್ಕೃತಿಯ ಪ್ರತೀಕವೂ ಹೌದು. ವಿಶೇಷವಾಗಿ ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಪು ತಾಲೂಕಿನ ಸರಕಾರಿ ಗುಡ್ಡೆಯಲ್ಲಿ ಹಿರಿಯರು ಮತ್ತು ಕಿರಿಯರು ಸೇರಿ ಇಂದಿಗೂ ಈ ಸಂಪ್ರದಾಯ ಜೀವಂತವಾಗಿದೆ.

ಆಧುನಿಕತೆಯ ಭರಾಟೆಯ ನಡುವೆಯೂ ಹಿರಿಯರು ಪಾಲಿಸಿಕೊಂಡು ಬಂದ ಆಚರಣೆಯನ್ನು ಯುವಕರು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷ. ಹೀಗೆ ನರಕ ಚತುರ್ದಶಿಯ ಮುಲ್ಲ ಮುಟ್ಟೆ ಮೂಲಕ ಹಳೆಯ ಸಂಪ್ರದಾಯಕ್ಕೆ ಹೊಸ ತಲೆಮಾರಿನ ಸ್ಪರ್ಶ. ಕರಾವಳಿಯ ಸಂಸ್ಕೃತಿಗೆ ಮತ್ತಷ್ಟು ಮೆರುಗು.