ಉಡುಪಿ: ಆರ್ ಎಸ್ ಎಸ್ ಟೀಕಿಸಿದ ಪ್ರಿಯಾಂಕ ಖರ್ಗೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೌಂಟರ್ ಕೊಟ್ಟಿದ್ದಾರೆ. ಇಲಾಖೆ ಬಗ್ಗೆ ಮೊದಲು ಗಮನ ಹರಿಸಿ. ಬಾಕಿ ಇರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಬೇಗ ಮಾಡಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದ್ದಾರೆ.

ಮೀಸಲಾತಿ ಕುರಿತು ಗೊಂದಲ ಇದ್ದ ಕಾರಣ ಚುನಾವಣೆ ಆಗಿರಲಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು 2 ವರ್ಷ ಆಯ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಚುನಾವಣೆ ಬಗ್ಗೆ ಗಮನ ಹರಿಸಿಲ್ಲ. ಮೀಸಲಾತಿ ಗೊಂದಲ ಪರಿಹಾರ ಆದಮೇಲೂ ಗಮನಹರಿಸಿಲ್ಲ. ತಕ್ಷಣ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆ ಮಾಡಬೇಕು ಎಂದರು.

ತೀರ್ಪಿನ ಗೊಂದಲವು ಪರಿಹಾರ ಆಗಿದೆ ಚುನಾವಣೆ ಮುಂದೂಡಲು ಯಾವುದೇ ಕಾರಣ ಇಲ್ಲ. ಪ್ರಜಾಪ್ರಭುತ್ವದಲ್ಲಿ ತಾಪಂ ಜಿಪಂ ಸದಸ್ಯರು ಜನರ ಸಮಸ್ಯೆ ಬಗೆಹರಿಸಲು ಅವಕಾಶ ಇಲ್ಲದಂತಾಗಿದೆ. ತ್ರಿಸ್ತರದ ವ್ಯವಸ್ಥೆಗೆ ಇದರಿಂದ ಧಕ್ಕೆಯಾಗಿದೆ. ಜನಸಂತ್ರ ವ್ಯವಸ್ಥೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದರು.

ಅದನ್ನು ಬಿಟ್ಟು ಆರ್ ಎಸ್ ಎಸ್ ನಿರ್ಬಂಧಿಸಬೇಕು ಅಂತೀರಿ, ಆರ್ ಎಸ್ ಎಸ್ ನಿಯಂತ್ರಣ ಮಾಡುತ್ತೇವೆ ಅನ್ನುವುದಕ್ಕೆ ಮೌಲ್ಯ ಇಲ್ಲ, ಗ್ರಾಮೀಣ ಅಭಿವೃದ್ಧಿ ಮಂತ್ರಿಗಳೇ ಮೊದಲು ಗ್ರಂಥಪಾಲಕರ ಸಮಸ್ಯೆ ಬಗೆಹರಿಸಿ. ಗ್ರಂಥಪಾಲಕರಿಗೆ 19000 ವೇತನ ಮಾಡಿಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ.

ಇದು ವೈಯಕ್ತಿಕ ಟೀಕೆ ಅಲ್ಲ ವಿಷಯದ ಮೇಲೆ ಮಾಡುತ್ತಿರುವ ಆಕ್ಷೇಪ, ಆರ್ ಎಸ್ ಎಸ್ ನಿಯಂತ್ರಣ ನಿಮಗೆ ಆಗದಿರುವ ಕೆಲಸ. ಸಿದ್ದರಾಮಯ್ಯನವರೇ ನಿಮ್ಮ ಮಂತ್ರಿಗಳನ್ನು ಕರೆದು ಬುದ್ದಿ ಹೇಳಿ ನೀವು ಅನುಭವಿಗಳು, ಆರ್ ಎಸ್ ಎಸ್ ಕಾರ್ಯಕರ್ತರಿಂದ ಬೆದರಿಕೆ ವಿಚಾರವಾಗಿ ಪ್ರಿಯಾಂಕ ಖರ್ಗೆ ಬಗ್ಗೆ ನಾನು ವ್ಯಕ್ತಿಗತ ದೂಷಣೆ ಮಾಡುವುದಿಲ್ಲ. ಪ್ರಧಾನಿಯಾಗಿದ್ದ ನೆಹರು ಅವರಿಗೆ ಆರ್ ಎಸ್ ಎಸ್ ರದ್ದು ಮಾಡಲು ಸಾಧ್ಯವಾಗಿಲ್ಲ ಎಂದರು.

ಅವರೇ ಪಥ ಸಂಚಲದಲ್ಲಿ ಅವಕಾಶ ಕೊಟ್ಟು ಗೌರವಿಸಿದರು. ಚೀನಾ ಯುದ್ದದಲ್ಲಿ ಸೇನೆಗೆ ಬೆಂಬಲವಾಗಿ ನಿಂತದ್ದು ಆರ್ ಎಸ್ ಎಸ್, ಪ್ರಿಯಾಂಕ ಖರ್ಗೆ ಅವರಿಗೆ ಇದೆಲ್ಲ ಅರ್ಥವಾಗಬೇಕು. ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾಗಾಂಧಿಯವರಿಗೆ ಆರ್ ಎಸ್ ಎಸ್ ಬಂದ್ ಮಾಡಲು ಆಗಿಲ್ಲ. ನೆಹರು ಇಂದಿರಾಗಾಂಧಿ ರಾಜೀವ್ ಗಾಂಧಿ ಅವರಿಂದ ಆಗಿಲ್ಲ ರಾಹುಲ್ ಗಾಂಧಿಯಿಂದಲೂ ಆಗಲ್ಲ, ಪ್ರಿಯಾಂಕ ಖರ್ಗೆ ಮಾಡ್ತಾರಂತೆ ಮಾಡ್ಲಿ ನೋಡೋಣ ಎಂದರು.

ಕರ್ನಾಟಕದಲ್ಲಿ ಕ್ಯಾಬಿನೆಟ್ ಮಂತ್ರಿಗೆ ಬೆದರಿಕೆ ಹಾಕುವವರು ಯಾರಿದ್ದಾರೆ.  ನಿಮ್ಮದೇ ಸರ್ಕಾರ ನಿಮ್ಮದೇ ವ್ಯವಸ್ಥೆ ಯಾರಾದರೂ ಇದ್ದರೆ ತನಿಖೆ ಮಾಡಿ,ಕ್ರಮ ತಗೊಳ್ಳಿ ನಿಮ್ಮನ್ನು ತಡೆದವರು ಯಾರು?ಗ್ರಾಮೀಣಾಭಿವೃದ್ಧಿ ಮಂತ್ರಿಗಳೇ ತಕ್ಷಣ ಚುನಾವಣೆ ಘೋಷಣೆ ಮಾಡಿಸಿ, 10 ಲಕ್ಷ ರೇಷನ್ ಕಾರ್ಡ್ ಅನೂರ್ಜಿತ ಮಾಡಿದ್ದೀರಿ, ಎರಡುವರೆ ವರ್ಷದಿಂದ ಒಂದೇ ಒಂದು ಬಸವ ವಸತಿ ಮನೆ ನೀಡಿಲ್ಲ, ಬಿಪಿಎಲ್ ಕಾರ್ಡು ರದ್ದು ಮಾಡಿದ್ದೀರಿ, ಆಯುಷ್ಮಾನ್ ಭಾರತ್ ಗೆ ಆಸ್ಪತ್ರೆಗಳು ನೋಂದಾವಣೆ ಮಾಡಿಕೊಂಡಿಲ್ಲ ಎಂದರು.

ರಾಜ್ಯ ಸರ್ಕಾರ ಹಣವನ್ನು ಕೊಡುತ್ತಿಲ್ಲ, ಬಡವರು ಬೆಡ್ ಇಲ್ಲ ಎಂದು ವಾಪಸ್ ಆಗುತ್ತಿದ್ದಾರೆ, ಇಎಸ್ಐ ಯೋಜನಗೆ ಆಸ್ಪತ್ರೆಗಳು ನೋಂದಾವಣೆ ಮಾಡಿಕೊಂಡಿಲ್ಲ, ಇ ಎಸ್ ಐ ನ ಮುಖ್ಯ ಕಚೇರಿಯಲ್ಲೇ ಅನಾಹುತ ಆಗಿದೆ ಎಂದರು.