ಉಡುಪಿ: ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಇಂದು ಉಡುಪಿ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು. ಪಕ್ಷದ ಜಿಲ್ಲಾದ್ಯಕ್ಷ ರಾಜೇಶ್ ಕೆ.ಎ. ಸಾಸ್ತಾನ ನೇತೃತ್ವದಲ್ಲಿ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಬಳಿಕ ಅಭಿಯಾನ ನಡೆಯಿತು.
‘ಎದ್ದೇಳು ಕನ್ನಡಿಗ ಕೆಆರ್ ಎಸ್ ಪಕ್ಷ ಸೇರು ಬಾ’ ಸದಸ್ಯತ್ವ ಅಭಿಯಾನ ಪಕ್ಷದ ರಾಜ್ಯ ಸಮಿತಿಯ ತಂಡದ ನೇತೃತ್ವದಲ್ಲಿ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಪ್ರಾರಂಭವಾಗಿ ಜಿಲ್ಲೆಯ ಪ್ರಮುಖ ನಗರಗಳಲ್ಲಿ ನಡೆಯಿತು.ಇದರ ಭಾಗವಾಗಿ ಲಂಚಮುಕ್ತ ಅಭಿಯಾನ ಪ್ರಯುಕ್ತ ನಗರದಲ್ಲಿ ಕೆಆರ್ ಎಸ್ ಪಕ್ಷದ ಸದಸ್ಯರು ಬಸ್ ನಿಲ್ದಾಣದಲ್ಲಿ ಜಾಗೃತಿ ಮೂಡಿಸಿದರು.
ರಾಜ್ಯದಲ್ಲಿನ ದುರಾಡಳಿತ, ಭ್ರಷ್ಟಾಚಾರ, ಅನ್ಯಾಯ, ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಪಕ್ಷವು ತನ್ನ ಪ್ರಾಮಾಣಿಕ ಹೋರಾಟದಿಂದ ನಾಡಿನ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಿದೆ. ಹೆಚ್ಚಿನ ಜನರು ಪಕ್ಷದ ಸದಸ್ಯತ್ವ ಪಡೆಯಲು ಮುಂದಾಗುತ್ತಿದ್ದಾರೆ. ಪಕ್ಷವನ್ನು ಮತ್ತಷ್ಟು ಬಲಪಡಿಸಲು ಮತ್ತು ಜನರ ಬಳಿಗೆ ಒಯ್ಯಲು ಈ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾಧ್ಯಕ್ಷ ರಾಜೇಶ್ ಕೆ.ಎ. ಸಾಸ್ತಾನ ,ಮತ್ತು ಕೃಷ್ಣ ಉಡುಪಿ ಹೇಳಿದರು.

