ಉಡುಪಿ: ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳದ ಯಕ್ಷಗಾನ ಸೇವೆಯ ವೇಳೆ ಮಹಿಷಾಸುರನ ಪಾತ್ರಧಾರಿ ತೋರಿದ ಅತಿರೇಕದ ಆವೇಶ ಈಗ ವಿವಾದಕ್ಕೆ ಕಾರಣವಾಗಿದೆ.
ರಂಗಸ್ಥಳದಲ್ಲಿ ಅಬ್ಬರಿಸುವ ವೇಳೆ ಪಾತ್ರಧಾರಿ ರಂಗಮಂಟಪದ ಕಂಬಕ್ಕೆ ಜೋರಾಗಿ ಗುದ್ದಿದ್ದು, ಈ ದೃಶ್ಯ ಕಂಡು ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಕಲಾಭಿಮಾನಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ.
ಕೆಲವರು ಇದು ಪಾತ್ರಕ್ಕೆ ಜೀವ ತುಂಬುವ ಕಲೆ ಎಂದರೆ, ಇನ್ನು ಕೆಲವರು ಇದು ಕಲೆಗೆ ನೀಡುವ ಗೌರವವಲ್ಲ, ಕಲಾವಿದರ ಇಂತಹ ವರ್ತನೆ ಮಿತಿ ಮೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

