ಉಡುಪಿ: ಐಷಾರಾಮಿ ಸ್ಲೀಪರ್ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಘಟನೆ ಸಂತಕಟ್ಟೆಯಲ್ಲಿರುವ ಎಲ್‌ವಿಟಿ ದೇವಸ್ಥಾನದ ಬಳಿ ಸೆಪ್ಟೆಂಬರ್ 20ರ ತಡರಾತ್ರಿ ಸಂಭವಿಸಿದೆ.
ಬಸ್ ಉಡುಪಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದರೆ, ಎದುರಿನಿಂದ ಬರುತ್ತಿದ್ದ ಕಾರು ಡಿವೈಡರ್ ಬಳಿ ಯೂ-ಟರ್ನ್ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಈ ವೇಳೆ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಎರಡೂ ವಾಹನಗಳಿಗೆ ಹಾನಿಯಾಗಿದೆ.

