ಉಡುಪಿ: ಬೆಂಗಳೂರಿನಲ್ಲಿ ಹಾಡು ಹಗಲೇ ದರೋಡೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಬೀದರ್ ನಲ್ಲೂ ಇದೇ ರೀತಿಯ ದರೋಡೆ ಪ್ರಕರಣ ನಡೆದಿತ್ತು. ಅದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರಿಗೆ ಯಾವುದೇ ವಿಚಾರದ ಬಗ್ಗೆ ಮಾಹಿತಿ ಇರೋದಿಲ್ಲ. ಗೃಹ ಸಚಿವರು ಅಸಹಾಯಕರಾಗಿದ್ದಾರೆ. ರಾಜ್ಯದಲ್ಲಿ ಈ ತರದ ಘಟನೆಗಳು ಪದೇ ಪದೇ ಮರುಕಳಿಸುವುದು ಸರಿಯಲ್ಲ ಎಂದರು.