ಉಡುಪಿ: ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ, ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರವರೆಗೆ ನಡೆಯುವ ಮಹಾರುದ್ರಯಾಗದ ಪೂರ್ವಭಾವಿಯಾಗಿ ರವಿವಾರ ಚಪ್ಪರ ಮುಹೂರ್ತ ಕಾರ್ಯಕ್ರಮ ಜರಗಿತು.

ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಆಚಾರ್ಯ ಅವರ ಪೌರೋಹಿತ್ಯಾದಲ್ಲಿ ಧಾರ್ಮಿಕ ವಿಧವಿಧಾನಗಳು ನಡೆಯಿತು. ಈ ಸಂದರ್ಭದಲ್ಲಿ ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್‌ ಮಾತನಾಡಿ,ಮಹಾರುದ್ರಯಾಗದ ಪೂರ್ವಭಾವಿಯಾಗಿ ಪುರೋಹಿತರ ನೇತೃತ್ವದಲ್ಲಿ ಇಂದು ಚಪ್ಪರ ಮುಹೂರ್ತ ನೆರವೇರಿಸಲಾಯಿತು. ಇದೊಂದು ಪುಣ್ಯದ ಕಾರ್ಯವಾಗಿದ್ದು, ಸಮಸ್ತ ಭಕ್ತಾಧಿಗಳು ಪಾಲ್ಗೊಂಡು ಮಹಾರುದ್ರಯಾಗವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಕರೆನೀಡಿದರು.

ಸಮಿತಿಯ ಸಂಚಾಲಕ ಕೆ. ಕೃಷ್ಣಮೂರ್ತಿ ಆಚಾರ್ಯ, ಶಂಕರನಾರಾಯಣದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ರುದ್ರಯಾಗ ಸಮಿತಿಯ ಸಂಚಾಲಕರಾದ ರಮೇಶ್‌ ಎಸ್‌. ತಿಂಗಳಾಯ, ನಂದಕಿಶೋರ್‌ ಕೆಮ್ಮಣ್ಣು, ಬಾಲಕೃಷ್ಣ ಕೊಡವೂರು, ಭಜನಾ ಸಂಚಾಲಕ ಧನಂಜಯ ಕಾಂಚನ್‌, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭಾಸ್ಕರ ಪಾಲನ್‌, ಎ. ರಾಜ ಸೇರಿಗಾರ, ವಾದಿರಾಜ್‌ ಸಾಲ್ಯಾನ್‌, ಯಶೋದರ ಸಾಲ್ಯಾನ್‌,

ಬಾಬ ಕೆ., ಉಷಾ ಆನಂದ ಸುವರ್ಣ, ಶೀಲಾ ದೇವಾಡಿಗ, ಪ್ರಮುಖರಾದ ಪಿ. ಗುರುರಾಜ್‌ ರಾವ್‌, ಯಾದವ ಅಮೀನ್‌, ಸದಾನಂದ ಮೂಲ್ಯ, ಬಿ. ಕುಶಲ ಶೆಟ್ಟಿ, ಆಶಾ ಚಂದ್ರಶೇಖರ್‌, ಸುರೇಂದ್ರ ಆಚಾರ್ಯ, ಸುನೀಲ್‌ ಪೂಜಾರಿ, ಶಂಕರ ಕುಂದರ್‌, ಹರಿಪ್ರಸಾದ್‌ ಮಲ್ಪೆ, ಶರತ್‌ ಹನುಮಾನ್‌ನಗರ, ಕುಸುಮ ಕರ್ಕೇರ, ಯಶೋದ ಕೆಮ್ಮಣ್ಣು, ಸತೀಶ್‌ ಕಲ್ಯಾಣಪುರ, ವಿಠಲ ಪೂಜಾರಿ, ಶಾಲಿನಿ ಸಾಲ್ಯಾನ್‌, ಅರ್ಚನಾ ದೇವಾಡಿಗ, ವಿಜಯ ಭಾಸ್ಕರ, ಸಂದ್ಯಾ ಪ್ರಕಾಶ್‌, ಸುಕನ್ಯ ಪೂಜಾರಿ, ಶಕುಂತಳ ಸದಾನಂದ, ಉಮೇಶ್‌ ರಾವ್‌ ಕೊಡವೂರು ಮೊದಲಾದವರು ಪಾಲ್ಗೊಂಡಿದ್ದರು.

View this post on Instagram

A post shared by News Karnataka (@newskarnataka)