ಕಟಪಾಡಿ : ರಾ. ಹೆ. 66ರ ಕಟಪಾಡಿ ಜಂಕ್ಷನ್‌ನಲ್ಲಿ ರಾ. ಹೆ. ಅಂಡರ್‌ಪಾಸ್ ಮತ್ತು ವೆಹಿಕಲ್ ಓವರ್‌ಪಾಸ್ ನಿರ್ಮಾಣ ಕಾಮಗಾರಿ ಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪರಿಶೀಲಿಸಿದರು.
ಸಂಸದ ಕೋಟ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಕಟಪಾಡಿ ಜಂಕ್ಷನ್ ಭಾಗದಲ್ಲಿ ಪ್ರಥಮ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕುಂದಾಪುರ ಮಂಗಳೂರು ಮಾರ್ಗದ ರಾ. ಹೆ. ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಂಡಿದ್ದು, ಎ. 10 ರಂದು ಬೆಳಗ್ಗೆ 10.30ಕ್ಕೆ ವಾಹನಗಳ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ಮೇಲ್ಲೇತುವೆ ಕಾಮಗಾರಿ ಮುಂದುವರಿಯಲಿದೆ ಎಂದರು.
ಶಾಸಕ ಗುರ್ಮೆ ಮಾತನಾಡಿ, ಪ್ರಥಮ ಹಂತದ ಕಾಮಗಾರಿ ಸುಸೂತ್ರ ವಾಗಿ ಕೈಗೊಂಡಿದ್ದು, 2ನೇ ಹಂತದ ಕಾಮಗಾರಿಯೂ ಗುತ್ತಿಗೆದಾರ ನ್ಯಾಶನಲ್‌ಇನ್ಸಾ ಪ್ರಾಜೆಕ್ಟ್ ಕಂಪೆನಿ ನಿಗದಿತ ಅವಧಿಯೊಳಗೆ ಮುಗಿಸುವ ವಿಶ್ವಾಸ ಇದೆ. ಪಾದಚಾರಿಗಳ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸ ಲಾಗುವುದು ಎಂದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಕಟಪಾಡಿ ಪಂಚಾಯತ್ ಮಾಜಿ ಸದಸ್ಯರು ಉಪಸ್ಥಿತಿ ಇದ್ದರು.

