ಉಡುಪಿ: ಅಕ್ರಮ ಮರಳು ಸಾಗಟದ ಲಾರಿ ಆರ್ಭಟಕ್ಕೆ ಬೈಕ್ ಸವಾರ ಬಲಿ ಯಾದ ಘಟನೆ ಉಡುಪಿ ಬಡಗುಬೆಟ್ಟು ಗ್ರಾಮದ ಶಾಂತಿನಗರ ಕ್ರಾಸ್ ನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾತ್ರಿಯಾದ ಕೂಡಲೇ ಮರಳು ದಂಧೆ ಲಾರಿಗಳ ಆರ್ಭಟ ಶುರುವಾಗಿದ್ದು, ಅತೀ ವೇಗ ನಿರ್ಲಕ್ಷ್ಯತನದ ಚಾಲನೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುತ್ತಿದೆ. ಬೈಕ್ ಸಹಸವರ ಜನಾರ್ಧನ್ ಮೃತಪಟ್ಟ ದುರ್ದೈವಿ. ಬೈಕ್ ಸವಾರ ಸಂತೋಷ್ ಗೆ ತೀವ್ರ ಗಾಯಗೊಂಡ ವ್ಯಕ್ತಿ. ಅಲೆವೂರಿನಿಂದ ಮಣಿಪಾಲ ಕಡೆಗೆ ಹೋಗುತ್ತಿದ್ದ ಮರಳು ಸಾಗಟದ ಟಿಪ್ಪರ್ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದೆ.
ಲಾರಿ ಹೊಡೆತಕ್ಕೆಸವಾರ ರಸ್ತೆಗೆ ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಜನಾರ್ಧನ್ ಆಸ್ಪತ್ರೆಗೆ ಸಾಗಿಸುವಾಗಲೇ ಸಾವನ್ನಪ್ಪಿದ್ದಾನೆ. ಪೊಲೀಸರ ತನಿಖೆ ವೇಳೆ ಲಾರಿಯಲ್ಲಿ ಅಕ್ರಮ ಮರಳು ಸಾಗಟ ಪತ್ತೆಯಾಗಿದೆ. ಜನತಾ ಸಂಸ್ಥೆಗೆ ಟಿಪ್ಪರ್ ಮಾಲಕ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

