ಉಡುಪಿ: ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಕ್ರಾಂತಿ ಚರ್ಚೆ ಹಿನ್ನೆಲೆ ದುರ್ಗಾಪರಮೇಶ್ವರಿ ದೇವರನ್ನು ಗೃಹ ಸಚಿವ ಜಿ. ಪರಮೇಶ್ವರ್ ಮೊರೆ ಹೋದರು.

ಕಾಂಗ್ರೆಸ್ ನ ಹಿರಿಯ ಮುಖಂಡ, ರಾಜ್ಯದ ದಲಿತ ನಾಯಕ ಜಿ ಪರಮೇಶ್ವರ್ ಮುಂಜಾನೆಯಿಂದ ನಡೆಯುತ್ತಿರುವ ಚಂಡಿಕಾ ಹೋಮ ಪ್ರಕ್ರಿಯೆಗೆ ಗೃಹ ಸಚಿವ ಜಿ. ಪರಮೇಶ್ವರ್ ಬೆಳ್ಮಣ್ಣು ಶ್ರೀದುರ್ಗಾಪರಮೇಶ್ವರಿ ದೇಗುಲ ಭೇಟಿ ನೀಡಿದರು.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದೇವಾಲಯದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಾಂಗಣದಲ್ಲಿ ಚಂಡಿಕಾಹೋಮ ನಡೆಯಿತು. ಚಂಡಿಕಾ ಹೋಮದ ಸಂಪೂರ್ಣ ವಿಧಿ ವಿಧಾನದಲ್ಲಿ ಜಿ ಪರಮೇಶ್ವರ್ ಭಾಗಿಯಾದರು. ಪತ್ನಿ ಕನ್ನಿಕಾ ಪರಮೇಶ್ವರ್ ಜೊತೆ ಚಂಡಿಕಾ ಹೋಮದಲ್ಲಿ ಗೃಹಸಚಿವ ಭಾಗಿಯಾದರು.

ಬೆಳ್ಮಣ್ಣು ವಿಘ್ನೇಶ್ ಭಟ್ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಿತು. ಪೂರ್ಣಾಹುತಿಯಲ್ಲಿ ಭಾಗಿಯಾಗಿ ಜಿ.ಪರಮೇಶ್ವರ್ ದಂಪತಿ ಪ್ರಸಾದ ಸ್ವೀಕರಿಸಿದರು. ಶ್ರೇಯೋಭಿವೃದ್ಧಿಗಾಗಿ ಗೃಹ ಸಚಿವ ಜಿ ಪರಮೇಶ್ವರ್ ಪ್ರಾರ್ಥಿಸಿದರು. ಮನಶಾಂತಿ, ಕಂಟಕ ನಿವಾರಣೆ, ಧೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಚಂಡಿಕಾ ಹೋಮದಲ್ಲಿ ಅರ್ಚಕ ವೃಂದ ಭಾಗಿಯಾದರು. ವಿಘ್ನೇಶ್ ಭಟ್ ತಂಡದಿಂದ ಜಿ ಪರಮೇಶ್ವರ್ ದಂಪತಿಗೆ ವಿಶೇಷ ಪ್ರಸಾದ ಸ್ವೀಕರಿಸಿದರು.