ಉಡುಪಿ: ಇಲ್ಲಿ ಮಕ್ಕಳು ಶಾಲೆಗೆ ಹೋಗಬೇಕಿದ್ರೆ ಆಟೋ ತಳ್ಳಬೇಕು ಇದು ಶಿಕ್ಷೆಯಲ್ಲ, ಈ ಮಕ್ಕಳಿಗೆ ಅನಿವಾರ್ಯವಾಗಿದೆ. ಬೈಂದೂರಿನ ಗೋಳಿಹೊಳೆ ಗ್ರಾ‌‌ಮದ ಚಾರ್ಸಾಲು ಜನರ ನಿತ್ಯದ ಗೋಳಾಗಿದೆ.

ಮಳೆಯಿಂದಾಗಿ ಚಾರ್ಸಾಲು ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಇಲ್ಲಿಂದ ಆಟೋದಲ್ಲಿ ಮಕ್ಕಳು ಶಾಲೆಗೆ ತೆರಳುತ್ತಾರೆ. ಕೆಸರಿನಲ್ಲಿ ಆಟೋ ಹೂತು ‌ಹೋದರೆ ಮಕ್ಕಳೇ ತಳ್ಳಬೇಕು. ಮಕ್ಕಳು ಶಾಲೆಗೆ ತಲುಪುವವರೆಗೆ ಪೋಷಕರಿಗೂ ಆತಂಕ ಉಂಟಾಗುತ್ತದೆ.

ಶಾಸಕರಿಗೆ ದೂರಿತ್ತರೂ ರಸ್ತೆಗೆ ಡಾಂಬರು ಭಾಗ್ಯ ಒದಗಿ ಬಂದಿಲ್ಲ. ಕೆಸರುಮಯ ಯೂನಿಫಾರಂ ಧರಿಸಿಯೇ ಶಾಲೆ ಸೇರಬೇಕು. ಚಾರ್ಸಾಲು-ಮಾವಿನಕಾಯಿ ರಸ್ತೆಗೆ ಕಾಯಕಲ್ಪ ಬೇಕಿದೆ. 40ಕ್ಕೂ ಅಧಿಕ ಮನೆಗಳಿದ್ದರೂ ಸೂಕ್ತ ರಸ್ತೆಯ ಕೊರತೆ ಉಂಟಾಗಿದೆ.