ಉಡುಪಿ: ಕರಾವಳಿ ಅಂದ್ರೆ ದೈವರಾಧನೆಯ ತವರೂರು. ಇಲ್ಲಿ ನಿತ್ಯ ಒಂದಲ್ಲ ಒಂದು ಕಡೆಯಲ್ಲಿ ನೇಮೊತ್ಸವ, ಜಾತ್ರೆ ಕೋಲ ತಂಬಿಲ ನಡೆಯುವುದು ಸರ್ವೆ ಸಾಮಾನ್ಯ. ತುಳುನಾಡಿನ ಆರಾಧನೆ ಜೊತೆಗೆ ಮರಾಟಿ, ಚಪ್ಟೆಕಾರ್ ಸಮುದಾಯದ ಆಚರಣೆಗಳು ಬೆಸೆದುಕೊಂಡಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಕಾಪು ಮಲ್ಲಮಾರಿನಲ್ಲಿ ನಡೆದ ದೈವ ನೇಮ ಉತ್ಸವದ ಜೊತೆಗೆ ದೇವಿಗೆ ಗೊಂದೋಲು ಸೇವೆ ಮತ್ತು ದೇವಿ ದರ್ಶನ ಸೇವೆ ನಡೆಯಿತು. ಗೊಂದೋಲು ಮತ್ತು ದೇವಿ ದರ್ಶನದ ನಂತರ ಪಂಜುರ್ಲಿ ಮತ್ತು ವರ್ತೆ ಪಂಜುರ್ಲಿ ದೈವದ ನೆಮೋತ್ಸವ ನಡೆಯಿತು.
ಗೊಂದೋಲು ಸೇವೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ರು. ಮಣ್ಣಿನ ಮೂಲ ಸಂಸ್ಕ್ರತಿ ಉಳಿಯಬೇಕಾದ್ರೆ ಇಂತಹ ಆಚರಣೆ ಹೆಚ್ಚು ಹೆಚ್ಚು ನಡೆಯಬೇಕಿದೆ.

