ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಫಿಟ್ ಇಂಡಿಯಾ ಸೈಕಲ್ ಜಾಥವನ್ನು ಭಾನುವಾರ ಆಯೋಜಿಸಲಾಯಿತು. ನಗರದ ಜೋಡುಕಟ್ಟೆಯಲ್ಲಿ ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಜಾಥಕ್ಕೆ ಚಾಲನೆ ನೀಡಿದರು.
ಬಳಿಕ ಜಾಥವು ಉಡುಪಿಯ ಅಜ್ಜರಕಾಡು, ಬ್ರಹ್ಮಗಿರಿ, ಬನ್ನಂಜೆ, ಕರಾವಳಿ ಬೈಪಾಸ್, ಸಿಟಿ ಬಸ್ ನಿಲ್ದಾಣದ ಮಾರ್ಗವಾಗಿ ಆಗಮಿಸಿ ಬೋರ್ಡ್ ಹೈಸ್ಕೂಲ್ನಲ್ಲಿ ಮುಕ್ತಾಯಗೊಂಡಿತು. ಉಡುಪಿ ಡಿವೈಎಸ್ಪಿ ಪ್ರಭು ಡಿಟಿ ಅವರ ನೇತೃತ್ವದಲ್ಲಿ ಸುಮಾರು 100ಕ್ಕೂ ಅಧಿಕ ಪೋಲಿಸರು ಭಾಗವಹಿಸಿದ್ದರು.

