ಉಡುಪಿ: ಮಲ್ಪೆ ಬಂದರಿನ ಧಕ್ಕೆಗೆ ಬಿದ್ದು ಓರಿಸ್ಸಾ ಮೂಲದ ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಓರಿಸ್ಸಾದ ಮನಧಾರ ಮುಂಡಾ (30) ಎಂದು ಗುರುತಿಸಲಾಗಿದೆ. ಇವರು ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿ ಕೊಂಡಿದ್ದು ಸೆ.28ರಂದು ರಾತ್ರಿ ಆಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.
ಸೆ.30ರಂದು ಬೆಳಗ್ಗೆ ಬಂದರಿನ ಸಿಎಸ್ಪಿ ಕಛೇರಿ ಎದುರು ದಕ್ಕೆಯ ನೀರಿನಲ್ಲಿ ಮುಂಡಾ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

