ಉಡುಪಿ: ದುಬೈ ನೊಂದಣಿಯ ದುಬಾರಿ ಕಾರುಗಳು ವಶಕ್ಕೆ ಪಡೆಯಲಾಗಿದೆ. ಮಣಿಪಾಲದ ಜಿಲ್ಲಾಧಿಕಾರಿ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರುಗಳು ಸದ್ದು ಮಾಡುತ್ತಿತ್ತು. ಮಣಿಪಾಲ‌ ವಿದ್ಯಾರ್ಥಿಗಳು ಕರೆದಿದ್ದ ಪಾರ್ಟಿಗೆ ಕೇರಳ ಮೂಲದ ಯುವಕರು ಬಂದಿದ್ದರು.

ತಾವು ತಿರುಗಾಡಲು ದುಬೈನಿಂದ ಆಮದು ಮಾಡಿಕೊಂಡಿದ್ದ ಡಾಡ್ಜ್ ಹೆಸರಿನ ಕಾರಿನಲ್ಲಿ ಯುವಕರು ಬಂದಿದ್ದರು. ದುಬೈನಲ್ಲಿ ವಾಸವಿರುವ ಕೇರಳ ಮೂಲದ ಸುಲೈಮನ್ ಮೊಹಮದ್(26), ಮೊಹಮ್ಮದ್ ಶರೀಫ್(27)ಅಬ್ದುಲ್ ನಜೀರ್ (25) ಆರು‌ ತಿಂಗಳು ಭಾರತದಲ್ಲಿ ತಿರುಗಾಡಲು ಕಾರುಗಳನ್ನ ಆಮದು ಮಾಡಿಕೊಂಡಿದ್ದರು.

ದುಬೈ ದೇಶಕ್ಕೆ 30 ಲಕ್ಷ ಹಾಗೂ ಭಾರತಕ್ಕೆ 1 ಕೋಟಿ ಹಣ ಕಟ್ಟಿರುವ ಮಾಹಿತಿಯನ್ನು ಯುವಕರು ನೀಡಿದ್ದಾರೆ. ಹಡಗಿನಲ್ಲಿ ಕಾರುಗಳನ್ನು ಭಾರತಕ್ಕೆ ಯುವಕರು ತಂದಿದ್ದಾರೆ. ಉಡುಪಿಯ ಮಣಿಪಾಲದಲ್ಲಿರುವ ಸ್ನೇಹಿತರ ಆಹ್ವಾನದ ಮೇರೆಗೆ ಡಾಡ್ಜ್ ಕಾರಿನಲ್ಲಿ ಯುವಕರು ಬಂದಿದ್ದಾರೆ.

ಮಣಿಪಾಲದಲ್ಲಿ ಕಾರುಗಳ ಕರ್ಕಶ ಸದ್ದು ಕೇಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರುಗಳ ದಾಖಲೆಗಳನ್ನ ಆರ್ ಟಿಓಗೆ ಕಳುಹಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ನೆಲದಲ್ಲಿ ದುಬೈ ನೊಂದಣಿ ಕಾರು ಓಡಾಟಕ್ಕೆ ಅನುಮತಿ ಇದೆಯೇ ಎಂದು ಪರಿಶೀಲನೆ ನಡೆಸಲಾಗಿದೆ. ಮುಂದಿನ ಕ್ರಮಕ್ಕೆ ಆರ್ ಟಿಓಗೆ ಮಣಿಪಾಲ ಪೊಲೀಸರು ಪತ್ರ ಬರೆದಿದ್ದಾರೆ.