ಉಡುಪಿ: ಕಾಪು ತಾಲೂಕಿನ ಇನ್ನಂಜೆ ರೈಲ್ವೆ ನಿಲ್ದಾಣಕ್ಕೆ ಸಮರ್ಪಕ ರಸ್ತೆ ನಿರ್ಮಾಣ ಆಗಬೇಕಿದೆ. ಪ್ರಸ್ತುತ ಇಲ್ಲಿ ಮಂಗಳೂರು- ಮಡ್ತಾಂವ್ ಪ್ಯಾಸೆಂಜ‌ರ್ ರೈಲು ಮಂಗಳೂರು-ಮಡ್ತಾಂವ್ ಡೆಮೂ ರೈಲುಗಳು ನಿಲುಗಡೆಯಾಗುತ್ತಿದೆ. ರೈಲು ಬರುವ ಕೆಲಹೊತ್ತಿನ ಮೊದಲು ಟಿಕೆಟ್ ನೀಡಲಾಗುತ್ತದೆ. ಕಾಪು ತಾಲೂಕಿನ ಹೆಚ್ಚಿನ ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ.

600 ಮೀ. ಉದ್ದದ ಫ್ಲಾಟ್‌ಫಾರಂ, 1.2 ಕಿ.ಮೀ. ಉದ್ದದ ಲೂಪ್‌ಲೈನ್, ಕಟ್ಟಡದಲ್ಲಿ ವೈಟಿಂಗ್ ಹಾಲ್, ಶೌಚಾಲಯಗಳು, ಟಿಕೆಟ್ ಕೌಂಟರ್, ಸ್ಟೇಷನ್ ಮಾಸ್ಟರ್ ಕಚೇರಿ, ಕುಡಿಯುವ ನೀರಿನ ವ್ಯವಸ್ಥೆ, ಈ ಎಲ್ಲಾ ಸಕಲ ಸೌಲಭ್ಯಗಳಿದ್ದರೂ ಸಂಪರ್ಕ ರಸ್ತೆ ಮಾತ್ರ ಹದಗೆಟ್ಟಿದೆ.

ಇನ್ನೆಂಜೆ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿತ್ತು. ಮೇಲ್ದರ್ಜೆಗೆ ಏರಿದ ನಂತರವೂ ರಸ್ತೆ ಸಂಪರ್ಕ ಇನ್ನೂ ಸರಿಯಾಗಿ ಆಗದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.