ಉಡುಪಿ: ತುಳುನಾಡಿನಲ್ಲಿ ಭಿನ್ನ ಆರಾಧನೆಗೆ ಒಳಪಡುವುದು ಬೊಬ್ಬರ್ಯ ದೈವ. ಕರಾವಳಿಯ ಪ್ರಸಿದ್ದ ಬೊಬ್ಬರ್ಯ ಕ್ಷೇತ್ರಗಳಲ್ಲಿ ಉಡುಪಿಯ ತೆಂಕನಿಡಿಯೂರು ಗ್ರಾಮದ ಬೆಳ್ಕಳೆ (ಬೊಲ್ಯಾಲ) ಬೊಬ್ಬರ್ಯ ಕ್ಷೇತ್ರ. ಈ ಕ್ಷೇತ್ರವು ಈ ಹಿಂದೆ ಸಿರಿಗಳ ಅಲಾಡೆಯಾಗಿತ್ತು ಪ್ರತೀತಿ ಇದೆ.

ವಿಶೆಷ ಏನಂದ್ರೆ ಇಲ್ಲಿ ಎರಡು ಬೊಬ್ಬರ್ಯ ದೈವಗಳಿಗೆ ಅರಾಧನೆ ನಡೆಯುತ್ತೆ. ಕೋಲದ ದಿನ ದೈವ ನರ್ತಕರು ಸುಮಾರು ನಾಲ್ಕು ಕಿಲೋಮೀಟರ್ ದೂರದವರೆಗೆ ಗ್ರಾಮದೊಳಗೆ ಸವಾರಿ ನಡೆಸಿ ಬಳಿಕ ಕೋಲ ನಡೆಯುವುದು ಇಲ್ಲಿನ ವಾಡಿಕೆ.

ಇದೀಗ ಈ‌ ಪವಿತ್ರ ಕ್ಷೇತ್ರದಲ್ಲಿ ಬ್ರಹ್ಮ ಕುಂಭಾಭಿಶೇಕದ ಸಂಭ್ರಮ .ಊರ ಪರವೂರ ಸಮಸ್ತ ಭಕ್ತರ ಆಶಯದಂತೆ ಶ್ರೀ ಬೊಬ್ಬರ್ಯ ಹಾಗೂ ಪರಿವಾರ ದೈವಗಳ ನೂತನ ಶಿಲಾಮಯ ದೈವಲಾಯದ ಕಾರ್ಯವೂ ಪೂರ್ಣಗೊಂಡಿದ್ದು,ಎಪ್ರಿಲ್ 3ರಿಂದ ನೂತನ ದೈವಲಾಯದ ಸಮರ್ಪಣೆ ಹಾಗೂ ಬ್ರಹ್ಮಕುಂಬಾಭಿಷೇಕ, ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.

ಎ.3ರಂದು ಬೃಹತ್ ಹೊರೆಕಾಣಿಕೆ, ಎ.4ರಂದು ಬೊಬ್ಬರ್ಯ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಎ.6ರಂದು ವಿದ್ವಾನ್ ಪುತ್ತೂರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಶಿಖರ ಕಲಷ ಸಹಿತ ಬ್ರಹ್ಮ ಕುಂಭಾಭಿಷೇಕ ಜರಗಲಿದೆ. ಎ.10ರಂದು ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ ಸಂಭ್ರಮದಿಂದ ನಡೆಯಲಿದೆ.