ಉಡುಪಿ: ಕಳೆದ ಮೂರ್ನಾಲ್ಕು ದಿನಗಳಿಂದ‌ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಸೌಪರ್ಣಿಕ ನದಿ ತೀರದಲ್ಲಿ ಮತ್ತೆ ನೆರೆ ಸೃಷ್ಟಿಯಾಗಿದೆ. ಇದರಿಂದ ಬೈಂದೂರು ತಾಲೂಕಿನ ನಾವುಂದ ಕುದ್ರುವಿನಲ್ಲಿ ಸತತ ಮೂರನೇ ಬಾರಿಗೆ ನೆರೆಹಾವಳಿ ಉಂಟಾಗಿದೆ.
Screenshot 2024 08 02 155034

ಇನ್ನು ಭಾರೀ ಮಳೆಯಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅಬ್ಬರದ ಅಲೆಗಳಿಂದ ಪಡುಕೆರೆ ಸಮೀಪದ ಶಾಂತಿನಗರದ ಕಿನಾರ ಫ್ರೆಂಡ್ಸ್ ಬಳಿ ಕೊರೆತ ಉಂಟಾಗಿದೆ.

Screenshot 2024 08 02 155057

ಡ್ರೋನ್ ಕ್ಯಾಮೆರಾದಲ್ಲಿ ನಾವುಂದ ಕುದ್ರು ಮುಳುಗಡೆಯ ದೃಶ್ಯ ಸೆರೆಯಾಗಿದೆ. ಕುದ್ರುವಿನಲ್ಲಿ ವಾಸವಾಗಿರುವ ಏಳು ಕುಟುಂಬ ಜಲದಿಗ್ಭಂದನಕ್ಕೆ ಒಳಗಾಗಿದೆ. ಸೌಪರ್ಣಿಕ ನದಿ ಉಕ್ಕಿ ಹರಿಯುತ್ತಿರುವುದರಿಂದ ನಾವುಂದ ಸಂಪೂರ್ಣ ಜಲಾವೃತಗೊಂಡಿದೆ.