ಉಡುಪಿ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ರಾಮಮಂದಿರ ವಿಶ್ವಸ್ಥಮಂಡಳಿ ಟ್ರಸ್ಟ್ ಸದಸ್ಯ, ಅವರಿವರು ಮಾಡಿದ ಸುದ್ದಿಗಳಿಂದ ನಾನು ಅಭಿಪ್ರಾಯ ನೀಡಲು ಆಗಲ್ಲ. ಜುಲೈ 11ರಂದು ಟ್ರಸ್ಟನ ಸಭೆ ಇದೆ ಎಂದರು.

ಅಲ್ಲಿ ಈ ವಿಚಾರ ಚರ್ಚೆಗೆ ಬರುತ್ತೆ. ನಾನು ಆ ಸಭೆಯಲ್ಲಿ ಭಾಗಿಯಾಗುತ್ತೇನೆ. ವಿಚಾರ ತಿಳಿದು ನಂತರ ಪ್ರತಿಕ್ರಿಯೆ ನೀಡುತ್ತೇನೆ. ಸಿಂಧಿ ಸಮುದಾಯದ ಗಂಭೀರ ಆರೋಪಕ್ಕೆ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. 200 ಕೆ.ಜಿ ಬೆಳ್ಳಿ ನೀಡಿದರು ಪ್ರಶಸ್ತಿ ಕೊಟ್ಟಿಲ್ಲ ಎಂದು ಆರೋಪವಿದ್ದು, ದೊಡ್ಡ ಮಟ್ಟದ ದೇಣಿಗೆ ನೀಡಿದವರು, ಅಲ್ಲಿಯೇ ರಶೀದಿ ತೆಗೆದುಕೊಳ್ಳಬೇಕು.

ದೇಣಿಗೆ ನೀಡುವವರು ಮತ್ತು ಪಡೆದವರು ಇಬ್ಬರಿಗೂ ಜವಾಬ್ದಾರಿ ಇದೆ. ದೇಣಿಗೆ ತೆಗೆದುಕೊಂಡವರಿಗೆ ದೊಡ್ಡ ಜವಾಬ್ದಾರಿ ಇದೆ. ರಶೀದಿ ಕೊಟ್ಟಿಲ್ಲವಾದರೆ ಅದು ದೊಡ್ಡ ತಪ್ಪು. ಕೇವಲ ಬಾಯಿ ಮಾತಿನ ಹೇಳಿಕೆಗಳು ಉಳಿಯಬಾರದು. ಅವರು ಆರೋಪ ಮಾಡಿದ್ದರೆ ವಾಸ್ತವ ಇರಬಹುದು. ಆದರೆ ರಶೀದಿ ಕೊಟ್ಟಿಲ್ಲ ಅನ್ನೋ ಮಾತು ನಂಬಲು ಆಗಲ್ಲ. ಎಸ್ ಐಟಿ ತನಿಖೆ ನಡೆಸುತ್ತಿರುವುದು ಸ್ವಾಗತ ಅರ್ಹ ಬೆಳವಣಿಗೆ.

ತಪ್ಪಿದ್ದಲ್ಲಿ ಅದರ ವಿಮರ್ಶೆ ನಡೆಯಲೇಬೇಕು. ಆರೋಪಿಗಳಿಗೆ ತಕ್ಕುದಾದ ಶಿಕ್ಷೆ ಆಗಬೇಕು. ದೇಶ ವಿದೇಶದ ಸಮಸ್ತ ಶ್ರದ್ದಾಳುಗಳ ಕೇಂದ್ರ ಇದು. ಇಂತಹ ಕೇಂದ್ರದಲ್ಲಿ ಇಂತಹ ಘೋರ ಅಪಚಾರ ನಡೆಯಬಾರದಿತ್ತು, ನಡೆದದ್ದು ಹೌದಾದರೆ ಖಂಡಿತ ಶಿಕ್ಷೆ ಆಗಬೇಕು. ಸತ್ಯ ಸತ್ಯತೆ ಶೀಘ್ರವಾಗಿ ಹೊರಬರಬೇಕು.

ನಾನು ಹೋದಾಗಲೆಲ್ಲ ಕೆಲವು ಸಲಹೆ ನೀಡುತ್ತಿದ್ದೆ. ಸಭೆಗಳಲ್ಲೂ ಕೂಡ ಪ್ರಸ್ತಾಪ ಮಾಡುತ್ತಿದ್ದೆ. ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದರು. ನಾನು ಅಲ್ಲೇ ನಿಲ್ಲಲು ಸಾಧ್ಯವಿಲ್ಲ ಹೋದಾಗ ಪರಿಶೀಲಿಸಿ ಸಲಹೆ ನೀಡುತ್ತಿದ್ದೆ, ನಾನು ವಿಶ್ವಸ್ಥ ಮಂಡಳಿ ಸದಸ್ಯ ವಿಶ್ವಾಸ ಇಟ್ಟು ಸಲಹೆ ಕೊಡುತ್ತಿದ್ದೆ. ಸಂಬಂಧಪಟ್ಟವರು ವಿಶ್ವಾಸಾರ್ಹ ವ್ಯಕ್ತಿಗಳಾಗಿರಬೇಕಿತ್ತು ಎಂದರು.

ಚಂಪತ್ ರಾಯ್ ರಾಜೀನಾಮೆ ವಿಚಾರವಾಗಿ ಮಾತನಾಡಿ, ವಾಟ್ಸಪ್ ಗ್ರೂಪಿನಲ್ಲಿ ಅವರು ಯಾವುದೇ ಆಥರದ ಸಂದೇಶ ಕಳುಹಿಸಿಲ್ಲ. ಟ್ರಸ್ಟನ ವಾಟ್ಸಪ್ ಗ್ರೂಪಿನಲ್ಲಿ ಮಾಹಿತಿ ನೀಡಿಲ್ಲ. ಅವರ ನೇರ ನಂಬರ್ ನಿಂದಲೂ ನನಗೆ ಮೆಸೇಜ್ ಬಂದಿಲ್ಲ. ಈ ತರದ ವಿಷಯಗಳಿದ್ದಾಗ ಅವರು ಮೆಸೇಜ್ ಮಾಡುತ್ತಾ ಇದ್ದರು. ಅಲ್ಲಿ ಏನು ಬೆಳವಣಿಗೆ ಆಗಿದೆ ಗೊತ್ತಿಲ್ಲ. ವಿವಾದಾತೀತ ವ್ಯವಸ್ಥೆ ಯಾವುದು ಉಳಿದಿಲ್ಲ. ವಿವಾದ ಇರುವುದು ಸಹಜ ವಾಸ್ತವ ಎಷ್ಟು ಅವಾಸ್ತವ ಎಷ್ಟು ತಿಳಿಯಬೇಕು.

ಯಾವುದೇ ಸೇವಾ ಲಿಸ್ಟ್ ಹಾಕಬಾರದು ಎಂದು ಟ್ರಸ್ಟ್ ಒಂದು ನಿಲುವು ತಳೆದಿತ್ತು. ಇತರ ದೇವಸ್ಥಾನಗಳಲ್ಲಿ ಸೇವಾ ಪಟ್ಟಿ ಹಾಕುತ್ತಾರೆ. ಅಂತಹ ಪಟ್ಟಿ ಇಲ್ಲಿ ಯಾವುದೇ ಇಲ್ಲ. ನಾವು ಮಂದಿರಕ್ಕೆ ಹಣ ಹಾಕೊದರ ಬದಲು ಬಡವರಿಗೆ ಮನೆ ಕಟ್ಟಿಸಿ ಕೊಡಿ ಎಂದು ಕರೆ ನೀಡಿದ್ದೆವು. ರಾಮದೇವರ ಸೇವೆಯನ್ನು ಬಡವರಿಗೆ ಮನೆ ಕಟ್ಟಿ ಮಾಡಿಕೊಡಿ. ನಮ್ಮ ಊರಿನ ಬಡವರಿಗೆ ಸೂರು ನಿರ್ಮಾಣವಾಗಲಿ.

ಅವಕಾಶ ವಂಚಿತರಿಗೆ ದೀನ ದಲಿತರಿಗೆ ಮನೆ ಕಟ್ಟಿಸಿ ಕೊಡಬಹುದು. ನಮ್ಮ ಉದ್ಯೋಗದ ಜೊತೆ ಸಮಾಜ ಸೇವೆ ಮಾಡಲು ಅನೇಕ ಅವಕಾಶಗಳಿವೆ ಆ ಮೂಲಕ ರಾಮಸೇವೆ ಮಾಡಬಹುದು. ಒಳ್ಳೆಯ ಕೆಲಸ ಮಾಡಿ ದೇವರಿಗೆ ಸಮರ್ಪಿಸಬಹುದು. ರಾಮದೇವರು, ಜನನಿ ಜನ್ಮ ಭೂಮಿಶ್ಚಎಂದು ಹೇಳಿದ್ದಾರೆ. ದುಃಖಿತರಿಗೆ ಸಹಾಯ ಮಾಡುವುದೇ ನಿಜವಾದ ರಾಮ ಸೇವೆ. ಉಡುಪಿಯ ಪರಿಸರದಲ್ಲಿ ಈ ರಾಮ ಸೇವೆ ಆಗುತ್ತಿದೆ. ನೂರು ಕೆಜಿ ಬೆಳ್ಳಿ ಕೊಡುವುದರ ಬದಲು 1000 ಮನೆ ನಿರ್ಮಾಣ ಮಾಡಿ. ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಇದೆ. ಚೆನ್ನಾಗಿ ತನಿಖೆ ನಡೆಸುವ ವಿಶ್ವಾಸ ಇದೆ ಎಂದರು.

ಆರ್ ಎಸ್ ಎಸ್ ನೊಂದಣಿ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಸಂಘಟನೆಯನ್ನು ರಿಜಿಸ್ಟರ್ ಮಾಡಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ ಎಂದರು.