ಉಡುಪಿ: ಡಿಕೆಶಿಗೆ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ನೈತಿಕತೆ ಮತ್ತು ತಿಳುವಳಿಕೆ ಇಲ್ಲ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಚರ್ಚೆ ನಡೆಯುತ್ತಿದೆ. ಡಿಕೆಶಿಯನ್ನು ಸಿದ್ದರಾಮಯ್ಯ ಮುಂದಿನ ವರ್ಷ ಕಾಂಗ್ರೆಸ್ ನಿಂದ ಹೊರಗೆ ಹಾಕಬಹುದು ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿಕೆ ನೀಡಿದರು.

ಹೊರ ಬಿದ್ದರೆ ಡಿಕೆಶಿ ಮುಂದಿನ ವರ್ಷ ಗಣವೇಶ ಧರಿಸಿ ಪಥಸಂಚಲನ ನೋಡಬೇಕಾಗಬಹುದು. ಡಿಕೆಶಿ ಗಣವೇಶ ಧರಿಸುವುದನ್ನು ನೋಡುವ ಭಾಗ್ಯ ಕರುನಾಡಿಗೆ ಸಿಗಬಹುದು. ಡಿಕೆಶಿ ಆರ್ ಎಸ್ ಎಸ್ ಗೆ ಬರುತ್ತಾರೆ. ಟೀಕೆ ಮಾಡಿದ ಎಲ್ಲರೂ RSSನ್ನು ಒಪ್ಪಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆರ್ ಎಸ್ ಎಸ್ ನವರು, ಪ್ರಧಾನಿ ಮೋದಿಯನ್ನು ಇಡೀ ಪ್ರಪಂಚ ಒಪ್ಪಿದೆ. ಆರ್ ಎಸ್ ಎಸ್ ಚಟುವಟಿಕೆ ಬ್ಯಾನ್ ಮಾಡಬೇಕು ಎಂಬ ಪ್ರಿಯಾಂಕ ಖರ್ಗೆ ಸಿಎಂ ಗೆ ಪತ್ರ ಬರೆದಿರುವ ಹಿನ್ನೆಲೆ ಪ್ರಿಯಾಂಕ ಖರ್ಗೆ ಇನ್ನೊಂದು ಜನ್ಮದಲ್ಲಿ ಹುಟ್ಟಿ ಬಂದರೂ ಆರ್ ಎಸ್ ಎಸ್ ಮೇಲೆ ಕ್ರಮ ಸಾಧ್ಯವಿಲ್ಲ ಎಂದರು.

ಆರ್ ಎಸ್ ಎಸ್ ನಿಷೇಧ ಮಾಡುವ ತಾಕತ್ತು ಅವರಿಗಿಲ್ಲ ಅದು ಸಾಧ್ಯವೂ ಇಲ್ಲ, ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಪ್ರಥಮ 5 ಸ್ಥಾನವನ್ನು ನೀವು ಪಡೆಯಿರಿ. ಕಲಬುರ್ಗಿಯ ಉಸ್ತುವಾರಿ ಸಚಿವರಾಗಿ ಕರ್ತವ್ಯ ಮಾಡಿ ತೋರಿಸಿ, ಆನಂತರ ನೀವು ರಾಜ್ಯದ ಜನಕ್ಕೆ ಪಾಠ ಮಾಡಲು ಬನ್ನಿ ಎಂದರು.

ಮುಸ್ಲಿಮರು ಓಲೈಕೆ ಮಾಡುವ ಇಂತಹ ಹೇಳಿಕೆಯನ್ನು ಬಿಡಿ, ಕಲ್ಬುರ್ಗಿಯಲ್ಲಿ ಮಸೀದಿಯ ಆಜಾದ್ ನಿಷೇಧ ಮಾಡುವ ತಾಖತ್ ತೋರಿಸಿ, ಪತ್ರ ಪರಿಶೀಲಿಸುವ ಮೊದಲು ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲಿ, ಸಿಎಂ ಕೂಡ ಇವತ್ತಲ್ಲ ನಾಳೆ ಆರ್ ಎಸ್ ಎಸ್ ಅನ್ನು ಒಪ್ಪುತ್ತಾರೆ ಎಂದರು.