ಉಡುಪಿ: ಪತ್ನಿ ಜೊತೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ಕನ್ನಿಕಾ ಜೊತೆ ಕೊಲ್ಲೂರಿನಲ್ಲಿ ಜಿ.ಪರಮೇಶ್ವರ್ ಚಂಡಿಕಾ ಹೋಮ ಮಾಡಿದರು. ಉಪಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ಕೊಲ್ಲೂರಿಗೆ ಜಿ.ಪರಮೇಶ್ವರ್ ಭೇಟಿ ನೀಡಿದರು. ಕಳೆದ ಒಂದು ವಾರದಿಂದ ಜಿ.ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.

ಆರೋಗ್ಯ ಸುಧಾರಣೆಗೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ನೀಡಿದರು. ಚಂಡಿಕಾ ಹೋಮ ಸಹಿತ ವಿಶೇಷ ಪೂಜೆಯನ್ನು ಜಿ.ಪರಮೇಶ್ವರ್ ದಂಪತಿ ಸಲ್ಲಿಸಿದರು. ಬೆಂಗಳೂರು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಶರತ್ ಬಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ದೇವಾಲಯದ ಕಡತಗಳ ಪರಿಶೀಲನೆಯನ್ನು ಡಿಸಿಎಂ ಪರಮೇಶ್ವರ್ ನಡೆಸಿದರು. ಮುಜರಾಯಿ ಇಲಾಖೆ ಜಾಗದ ಒತ್ತುವರಿ ತೆರವಿಗೆ ಸೂಚನೆ ನೀಡಲಾಯಿತು. ಎಲ್ಲೆಲ್ಲಿ ಮುಜರಾಯಿ ಇಲಾಖೆ ಜಾಗವನ್ನ ಒತ್ತುವರಿ ಮಾಡಲಾಗಿದೆಯೋ ತೆರವು ಮಾಡಲು ಸೂಚನೆ ನೀಡಲಾಯಿತು.
ಆಯುಕ್ತರು ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಸೂಚನೆ ನೀಡಿದರು. ಜೊತೆಗೆ ಕೊಲ್ಲೂರಿನಲ್ಲಿ ಯಾತ್ರಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದರು. ಮೂಕಾಂಬಿಕೆ ದರ್ಶನ, ವಿಶೇಷ ಪೂಜೆ ಬಳಿಕ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದರು.

