ಉಡುಪಿ: ನಟ ದರ್ಶನ್ ಜೈಲು ಪಾಲಾಗಿರುವುದು ಕೇವಲ ದರ್ಶನ್ ಅವರಿಗಷ್ಟೇ ಅಲ್ಲದೆ ಅವರ ಪತ್ನಿ, ಮಗ, ತಾಯಿ ಮತ್ತು ಸೋದರ ದಿನಕರ್ ಗೆ ಕೂಡ ಅಪಾರ ಬೇಸರ, ಕಷ್ಟ ತಂದೊಡ್ಡಿದೆ. ಈ ಕಷ್ಟದಿಂದ ಆದಷ್ಟು ಬೇಗನೆ ಹೊರಬರಲು ಅವರ ಪತ್ನಿ ವಿಜಯಲಕ್ಷ್ಮೀ ದೇವರ ಮೋರೆ ಹೋಗಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಪ್ರಖ್ಯಾತ ಕೊಲ್ಲೂರು ಮೂಕಾಂಬಿಕ ದೇವಾಲಯದಲ್ಲಿ ಇಂದು ನವ ಚಂಡಿಕಾ ಹೋಮ ಮಾಡಿಸಿದ್ದಾರೆ.
Screenshot 2024 07 26 101631

ಈಗ ಆಷಾಢ ಮಾಸ, ದೇವಿಯ ಆರಾಧನೆ, ಹೀಗಾಗಿ ವಿಜಯಲಕ್ಷ್ಮಿಯವರು ತಮ್ಮ ಆಪ್ತರೊಂದಿಗೆ ಕಳೆದ ದಿನ ಅಪರಾಹ್ನ ಕೊಲ್ಲೂರಿಗೆ ಆಗಮಿಸಿ ನರಸಿಂಹ ಅಡಿಗ ಎಂಬುವವರ ಬಳಿ ನವಚಂಡಿಕಾ ಯಾಗವನ್ನು ಮಾಡಿಸುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಹೋಮ-ಹವನ ನಡೆಯುತ್ತಿದ್ದು, ಇಂದು ಬೆಳಗ್ಗೆ ಪೂರ್ಣಾಹುತಿಯಲ್ಲಿ ವಿಜಯಲಕ್ಷ್ಮೀ ಭಾಗಿ ಆಗಿದ್ದಾರೆ. ದರ್ಶನ್ ಬಂಧನ ಮುಕ್ತಿಗಾಗಿ ವಿಜಯಲಕ್ಷ್ಮೀ ಪ್ರಾರ್ಥನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Screenshot 2024 07 26 101716

ವಿಜಯಲಕ್ಷ್ಮಿ ಅವರು ತಮ್ಮ ಆಪ್ತೆಯರೊಂದಿಗೆ ದೇವಸ್ಥಾನದಲ್ಲಿ ನವಚಂಡಿಕಾ ಯಾಗ ಮಾಡಿಸುತ್ತಿರುವ, ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ಕಂಡುಬಂದಿದೆ. ದರ್ಶನ್ ಬಂಧನ ಬಳಿಕ ವಾರಕ್ಕೊಮ್ಮೆ ವಿಜಯಲಕ್ಷ್ಮಿ ಹೋಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬರುತ್ತಿದ್ದಾರೆ.