ಉಡುಪಿ: ಕರಾವಳಿಯ ಹೆಮ್ಮೆಯ ಮಟ್ಟುಗುಳ್ಳ ಬೆಳೆ ಈ ಬಾರಿ ಸಂಕಷ್ಟಕ್ಕೆ ಸಿಲುಕಿದೆ. ಮಳೆಕೊರತೆ, ಹಾಗೂ ನೀರಿನ ಅಭಾವ ಹಾಗೂ ಇದರ ನಡುವೆ ಉಪ್ಪು ನೀರಿನ ಹಾವಳಿಯ ಭೀತಿಯೂ ಬೆಳೆಗಾರರನ್ನು ಕಾಡುತ್ತಿದೆ ಎಕರೆ ಗಟ್ಟಲೆ ಮಟ್ಟುಗುಳ್ಳ ಬೆಳೆಯುತ್ತಿದ್ದ ಮಟ್ಟುಗ್ರಾಮದಲ್ಲಿ ಈ ಬಾರಿ ಬೆರಳೆಣಿಕೆಯಷ್ಟು ರೈತರು ಮಾತ್ರ ನಾಟಿಗೆ ಮುಂದಾಗಿದ್ದಾರೆ.

ಉಡುಪಿ ಜಿಲ್ಲೆಯ ಕೃಷಿ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಮಟ್ಟುಗುಳ್ಳಬದನೆಕಾಯಿ. ತನ್ನದೇ ಆದ ರುಚಿ, ಆಕಾರ ಮತ್ತು ಗುಣಮಟ್ಟದಿಂದ ನಾಡಿನಾದ್ಯಂತ ಜನಪ್ರಿಯತೆ ಪಡೆದಿರುವವಿಶಿಷ್ಟಬೆಳೆ. ವಿಶಿಷ್ಟ ಹಸಿರುಬಣ್ಣ, ವಿಭಿನ್ನರುಚಿ, ಸ್ಥಳೀಯ ಮಣ್ಣಿನ ಸೊಗಡು. ಇವೆಲ್ಲವೂ ಮಟ್ಟುಗುಳ್ಳದ ಹೆಗ್ಗಳಿಕೆ. ಪ್ರತಿವರ್ಷ ಸಪ್ಟೆಂಬರ್ ಮೊದಲ ವಾರದಲ್ಲಿ ಆರಂಭದಲ್ಲಿ ಉಡುಪಿ ನಗರದ ಮಟ್ಟು ಗ್ರಾಮದಲ್ಲಿ ಮಟ್ಟುಗುಳ್ಳ ನಾಟಿ ಕಾರ್ಯ ಚುರುಕುಗೊಳ್ಳುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ.

ಮಳೆ-ಬಿಸಿಲಿನ ಕಣ್ಣಾಮುಚ್ಚಾಲೆಯ ನಡುವೆ ರೈತರು ಕೃಷಿ ಆರಂಭಿಸಿದರು ಗುಳ್ಳ ಬೆಳೆಗಾರರು ಹಿಂದೇಟು ಹಾಕಿದ್ದಾರೆ. ವಾಡಿಕೆಯಷ್ಟು ಮಳೆಯಾಗದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ನೀರಿನ ಕೊರತೆ,ಹುಳು ಭಾದೆಯಿಂದಾಗಿ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಬಹುದು ಎಂಬ ಭೀತಿ ಬೆಳೆಗಾರರಲ್ಲಿದೆ. ಒಂದಾನೊಂದು ಕಾಲದಲ್ಲಿ ಮಟ್ಟು ಗ್ರಾಮದಲ್ಲಿ ಎಕರೆಗಟ್ಟಲೆ ಗುಳ್ಳ ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ಬೆರಳೆಣಿಕೆಯಷ್ಟು ರೈತರು ಮಾತ್ರ ಗುಳ್ಳ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಮಳೆ ಕೊರತೆ ಒಂದೆಡೆಯಾದರೆ,ಉಪ್ಪು ನೀರಿನಸಮಸ್ಯೆ,ಸಾಮಾನ್ಯ ನೀರಿನ ಸಮಸ್ಯೆ ಮತ್ತೊಂದೆಡೆ. ಮಟ್ಟುಗುಳ್ಳಕೃಷಿಗೆಪಿನಾಕಿನಿನದಿಯನೀರನ್ನೇಅವಲಂಬಿಸಿದ್ದರೈತರಿಗೆಇದೀಗಮತ್ತೊಂದುಸಂಕಷ್ಟಎದುರಾಗಿದೆ.

ನದಿಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರಿನ ಹರಿವು ಹಾಗೂ ನೀರಿನ ಲಭ್ಯತೆ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ರೈತರ ಅಳಲು. ಹೀಗಾಗಿ ಪಿನಾಕಿನಿ ನದಿಯ ಹೂಳು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.ಇದರ ನಡುವೆ ಉಪ್ಪು ನೀರಿನ ಹಾವಳಿಯ ಭೀತಿಯೂ ರೈತರನಿದ್ದೆಗೆಡಿಸಿದೆ. ನದಿಗೆ ಉಪ್ಪು ನೀರು ನುಗ್ಗಿದರೆ ಮಣ್ಣಿನ ಗುಣಮಟ್ಟಕ್ಕೆಹಾನಿಯಾಗುವುದಲ್ಲದೆ, ಮಟ್ಟುಗುಳ್ಳ ಬೆಳೆಯ ಮೇಲೂ ದುಷ್ಪರಿಣಾಮ ಬೀರುವ ಆತಂಕವಿದೆ.ಉಪ್ಪು ನೀರಿನ ಹಾವಳಿ ತಡೆಯಲು ಶಾಶ್ವತ ಪರಿಹಾರ ಕಲ್ಪಿಸುವಂತೆ ರೈತರು ಜಿಲ್ಲಾಡಳಿತ ,ಸರ್ಕಾರದ ಮೊರೆಹೋಗಿದ್ದಾರೆ.

ಪ್ರತಿ ವರ್ಷ ಉತ್ತಮ ಇಳುವರಿ ಹಾಗೂ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಮಟ್ಟುಗುಳ್ಳ ಬೆಳೆಯುತ್ತಿದ್ದ ರೈತರಿಗೆ ಈ ಬಾರಿ ಸಂಕಷ್ಟ ಎದುರಾಗಿದೆ. ನೀರು ಸಿಗದೆ ಬೆಳೆ ಕುಂಠಿತವಾದರೆ,ಕೃಷಿ ವೆಚ್ಚವೂ ವಾಪಸ್ಸು ಬಾರದ ಪರಿಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ರೈತರ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚುವ ಆತಂಕವಿದೆ.ಕರಾವಳಿಯ ಕೃಷಿ ಪರಂಪರೆಯ ಹೆಮ್ಮೆಯ ಮಟ್ಟುಗುಳ್ಳ ಇದೀಗ ಮಳೆಕೊರತೆ, ಉಪ್ಪು ನೀರಿನಅಭಾವ, ನದಿಯ ಹೂಳು ಹಾಗೂ ಉಪ್ಪು ನೀರಿನ ಹಾವಳಿಯ ನಡುವೆ ಬದುಕುಳಿಯಲು ಹೋರಾಡುತ್ತಿದೆ. ಒಟ್ಟಿನಲ್ಲಿ ಮಟ್ಟು ಗುಳ್ಳದ ರುಚಿ,ಗುಣಮಟ್ಟ ಮತ್ತು ಪರಂಪರೆ ಮುಂದಿನ ಪೀಳಿಗೆಗೂ ಉಳಿಯಬೇಕಾದರೆ ರೈತರ ಬೇಡಿಕೆಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕಿದೆ.