ಉಡುಪಿ: ವಿದ್ಯಾಮಾನ್ಯ ತೀರ್ಥರ ಆಶ್ರಮ ಶತಾಬ್ದಿ ಹಾಗೂ ಬೃಂದಾವನ ಪ್ರವೇಶ ರಜತೋತ್ಸವ ನಿಮಿತ್ತ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀಪಾದರ ನೇತೃತ್ವದಲ್ಲಿ ವಾಕ್ಯಾರ್ಥ ಗೋಷ್ಠಿ ನಡೆಸಲಾಯಿತು.
ಅಭಿನವ ಚಂದ್ರಿಕಾಚಾರ್ಯ ಉಪಾದಿಯೊಡನೆ ಶ್ರೀ ಸೋಸಲೆ ವ್ಯಾಸರಾಜ ಶ್ರೀಪಾದರಾದ ಶ್ರೀ ವಿದ್ಯಾಶ್ರೀಶ ತೀರ್ಥರನ್ನು ಪುತ್ತಿಗೆ ಶ್ರೀಗಳು ಸನ್ಮಾನಿಸಿದರು. ಶ್ರೀಕೃಷ್ಣನ ಪ್ರಸಾದರೂಪವಾಗಿ ಬೃಹತ್ ಕಡಗೋಲನ್ನು ಶಿಷ್ಯರೊಡಗೋಡಿ ನೀಡಿದರು. ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಶ್ರೀಪಾದರ ಅಧ್ಯಕ್ಷತೆ ವಹಿಸಿದ್ದರು.
ಜೀವ ಕರ್ತೃತ್ವ ವಿಚಾರ ಕುರಿತು ವಿ. ಹರಿದಾಸ ಭಟ್ಟಾಚಾರ್ಯ, ವಿ.ಆಚಾರ್ಯ ವೀರನಾರಾಯಣ ಪಾಂಡುರಂಗಿ , ವಿ. ಉಡುಪಿ ರಾಮನಾಥ ಆಚಾರ್ಯ ವಿ. ತಿರುಮಲಾಚಾರ್ಯ, ವಿ. ಶ್ರೀನಿಧಿ ಆಚಾರ್ಯ ಪ್ಯಾಟಿ ಮುಂತಾದ ವಿದ್ವಾಂಸರು ಗೋಷ್ಠಿ ನಡೆಸಿದರು.

