ಉಡುಪಿ: ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಹಿನ್ನಲೆ ರಾಜ್ಯ ಕರಾವಳಿಯಲ್ಲಿ, ಕರಾವಳಿ ಕಾವಲು ಪೊಲೀಸರ ಕಟ್ಟೆಚ್ಚರ ವಹಿಸಲಾಗಿದೆ. ಕರಾವಳಿ ಮೂಲಕ ಭಯೋತ್ಪಾದಕ ಚಟುವಟಿಕೆ ಸಾಧ್ಯತೆ ಹಿನ್ನಲೆ ಕರಾವಳಿ ಕಾವಲು ಪೊಲೀಸರಿಂದ ಕಣ್ಗಾವಲಾಗಿದೆ. ಸಮುದ್ರ ಮಾರ್ಗದ ಮೂಲಕ ಶತ್ರುಗಳು ಒಳ ನುಗ್ಗದಂತೆ ತಡೆಯಲು ಬೋಟ್ ಗಳ ತಪಾಸಣೆ ನಡೆಸಲಾಗುತ್ತಿದೆ.

ಉಡುಪಿ ಕರಾವಳಿ ಪೊಲೀಸ್ ಎಸ್. ಪಿ ಮಿಥುನ್ ಸೂಚನೆ ಹಿನ್ನಲೆ ತಪಾಸಣೆ ಪೊಲೀಸರನ್ನು ಹೆಚ್ಚಿಸಿದೆ. ಸಮುದ್ರ ಭಾಗದಲ್ಲಿ ಕರಾವಳಿ ಕಾವಲು ಪೊಲೀಸರು ತಪಾಸಣೆ ಹಚ್ಚಿಸಿದ್ದಾರೆ. ಉಡುಪಿ ಜಿಲ್ಲೆಯ ಗಂಗೊಳ್ಳಿ ಕರಾವಳಿ ಪೊಲೀಸರಿಂದ ಆಳ ಸಮುದ್ರದಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದೆ. ಶಸ್ತ್ರ ಸನ್ನದ್ಧರಾಗಿ ಕರಾವಳಿ ಕಾವಲು ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.