ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ ಸಂದರ್ಭದಲ್ಲಿ ವೈಭವವನ್ನು ಕಾಣಲಿದ್ದು ಸಿಎಂ ಡಿ.ಕೆ ಶಿವಕುಮಾರ್ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ.

ಉಚ್ಚಿಲ ನವರಾತ್ರಿ ಸಂಭ್ರಮ ಉಡುಪಿ ಜಿಲ್ಲೆಯ ಜನರಿಗೆ ಸಂಭ್ರಮ ದುಪ್ಪಟ್ಟು ಮಾಡಿದೆ. ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಾಲಯದಲ್ಲಿ ಮೊಗವೀರ ಮುಖಂಡ ಹಾಗೂ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್ ನೇತೃತ್ವದಲ್ಲಿ ಐದು ವರ್ಷಗಳ ಹಿಂದೆ ನವರಾತ್ರಿ ಹಿನ್ನಲೆಯಲ್ಲಿ ದಸರಾ ಆಚರಣೆ ಶುರುವಾದ ದಿನದಿಂದ ಉಚ್ಚಿಲ ಕ್ಷೇತ್ರವಾಗಿ ಮಾರ್ಪಟ್ಟಿತ್ತು.

ನಾಲ್ಕು ವರ್ಷ ದಸರಾ ಆಯೋಜನೆ ಯಶಸ್ವಿಯಾಗಿ ನಡೆದು ಈಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ.ಈ ಬಾರಿ ಒಂಬತ್ತು ದಿನಗಳ ಕಾಲ ಅದ್ದೂರಿ ನವರಾತ್ರಿ ವೈಭವಕ್ಕೆ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸಂಜೆ 4.40ಕ್ಕೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವತಿಯಿಂದ ಆಯೋಜಿಸಿರುವ ಮಹಿಳಾ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಸಿ ಎಂ .ಉಚ್ಚಿಲ ಮಹಾಲಕ್ಷ್ಮಿ ದರುಶ ಪಡೆದು, ಮೋಗವಿರ ಕುಲ ಗುರು ಮಾಧವ ಮಂಗಲ ಅವರ ಕಂಚಿನ ಪುತ್ಥಳಿ ಗೆ ಪುಷ್ಪ ಆರ್ಚನೆ ನಡೆಸಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮ ಭಾಗವಹಿಸಿ ಸನ್ಮಾನ ಸ್ವೀಕರಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಗೌರವ ಸಲಹೆಗಾರ ನಾಡೋಜ ಡಾ ಜಿ ಶಂಕರ್ ಮೀನುಗಾರರ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳನ್ನು ಮುಂದಿಡಲಿದ್ದಾರೆ. ತುಳು ಭಾಷೆಗೆ ರಾಜ್ಯದ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರನ್ನು ಅಭಿನಂದನ ಸಮಾರಂಭವೂ ನಡೆಯಲಿದೆ.

ಈ ಬಾರಿಯೂ ನವದುರ್ಗೆಯರ ದರ್ಶನ ಒಂದೇ ಸೂರಿನಡಿ ವ್ಯವಸ್ಥೆ ಮಾಡಲಾಗಿದ್ದು . ಈ ವಿಶೇಷ ವಿದ್ಯುದ್ದೀಪಾಲಂಕಾರ ಉಚ್ಚಿಲ ಕ್ಷೇತ್ರದುದ್ದಕ್ಕೂ ಕಣ್ಮನ ಸೆಳೆಯುತ್ತಿದೆ. 9 ದಿನಗಳ ಕಾಲ ದೇವಿ ವಿಶೇಷ ಅಲಂಕಾರ ಪೂಜೆ ನಿರಂತರ ನಡೆಯಲಿದೆ.ಸಾಂಸ್ಕೃತಿಕ ವೈಭವ, ಸಂಗೀತ ಸಂಭ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ನಡೆಯುತ್ತಿದ್ದು ಸಾವಿರಾರು ಸಂಖ್ಯೆ ಭಕ್ತರು ದೇವಿಯ ದರುಶನ ಪಡೆಯುತ್ತಿದ್ದಾರೆ.

ಒಟ್ಟಾರೆ ಐದನೇ ವರ್ಷದ ದಸರಾ ಹತ್ತು ಹಲವು ಸ್ಪರ್ಧೆಗಳು, ಮನಮೋಹಕ ವಸ್ತು ಪ್ರದರ್ಶನದ ಜೊತೆಗೆ ಮುಖ್ಯ ಮಂತ್ರಿಗಳ ಆಗಮನ ದಸರಾ ಸಂಭ್ರಮ ಇಮ್ಮಡಿಗೊಳಿಸಲಿದೆ.