ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲಿ ಬಾಲ್ಯವಿವಾಹ ಹೆಚ್ಚಳ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸಪೂಜಾರಿ ಟೀಕಿಸಿದ್ದಾರೆ. ಸಿಎಂ ತವರಲ್ಲಿ ವರ್ಷಕ್ಕೆ 60 ಬಾಲ್ಯ ವಿವಾಹ ನಡೆದಿದೆ ಎಂಬ ಮಾಹಿತಿ ತಿಳಿದೆ. ಸಾಮಾಜಿಕ ನ್ಯಾಯ, ಆಡಳಿತ,ಮಕ್ಕಳ ರಕ್ಷಣೆ ಇದೇನಾ? ನಮ್ಮದೇ ದಕ್ಷ ಆಡಳಿತ ಎನ್ನುವುದಕ್ಕೆ ಇದು ಸ್ಯಾಂಪಲ್ಲಾ? ಸಿದ್ದರಾಮಯ್ಯನವರ ಬಿಗು ನಿಲುವಿನ ಆಡಳಿತ ಕ್ಕೆ ಸಾಕ್ಷಿ ಇದು ಎಂದರು.
ವಕ್ಫ್ ಬಿಲ್ ಮಂಡನೆಗೆ ವಿರೋಧ ವಿಚಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ವಕ್ಫ್ ಮಂಡಳಿಗೆ ಕೋರ್ಟಿಗೆ ಹೋಗುವ ಅಧಿಕಾರ ಇಲ್ಲ. ಬಿಲ್ ಜಾರಿಗೊಳಿಸುವ ಮೂಲಕ ಪಾರದರ್ಶಕತೆ ಜಾರಿಗೆ ತರಲಾಗಿದೆ. ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಸ್ಪಷ್ಟವಾಗಿದೆ. ಎರಡು ಲಕ್ಷ ಕೋಟಿ ರುಪಾಯಿ ವಕ್ಫ್ ಆಸ್ತಿ ಶ್ರೀಮಂತ ರಾಜಕಾರಣಿಗಳ ಪಾಲಾಗಿದೆ. ಶ್ರೀಮಂತ ರಾಜಕಾರಣಿಗಳು ಮೆಡಿಕಲ್ ಕಾಲೇಜು, ಶಾಲೆ ಆಸ್ಪತ್ರೆ -ವಾಣಿಜ್ಯ ವ್ಯವಹಾರಗಳನ್ನು ಮಾಡುತ್ತಿದ್ದಾರೆ ಎಂದರು.
ಕಡಿಮೆ ಬೆಲೆಗೆ ಬಾಡಿಗೆ ಅಥವಾ ಲೀಸ್ ಗೆ ಪಡೆದು ಎರಡು ಲಕ್ಷ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದವರು ಈ ಮಾಹಿತಿಯನ್ನು ನೀಡುತ್ತಿದ್ದಾರೆ. ಬಡವರಿಗೆ ಮಹಿಳೆಯರಿಗೆ ಮಕ್ಕಳ ಶಿಕ್ಷಣಕ್ಕೆ ವಕ್ಫ್ ಆಸ್ತಿ ಬಳಕೆಯಾಗಬೇಕು. ಶ್ರೀಮಂತರ ಹಿಡಿತದಿಂದ ತಪ್ಪಿಸಿ ಬಡ ಮುಸ್ಲಿಮರ ಪರವಾಗಿ ಈ ಕಾಯ್ದೆ ಇದೆ. ಮತೀಯ ಮತ್ತು ಮತದ ಕಾರಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಕ್ಫ್ ಕಾಯಿದೆ ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು ಎಂದು ವಿನಂತಿ ಮಾಡುತ್ತಿದ್ದೇನೆ ಎಂದರು.

