ಉಡುಪಿ: ಭಟ್ಕಳ ಕಪ್ಪೆಚಿಪ್ಪು ದುರಂತ ಪ್ರಕರಣ ನಡೆದಿದ್ದು, ಕುಂದಾಪುರ ಆಸ್ಪತ್ರೆಯಲ್ಲಿ ಮಹಾದೇವಿ ನಾಯ್ಕ್ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ತಾಯಿಯ ಆರೈಕೆಯಲ್ಲಿ ಮಗಳು ಶೋಭ ಭಾವುಕ ಹೇಳಿಕೆ ನೀಡಿದ್ದಾರೆ. ಕಪ್ಪೆಚಿಪ್ಪು ಆರಿಸಲು ಹೋಗ್ತೇನೆ, ನೀನು ಮನೆಗೆ ಬಾ ಅಂತಾ ಅಮ್ಮ ಕರೆದಿದ್ದರು. ಮನೆಗೆ ಬಂದಾಗಲೇ ದುರಂತ ನಡೆದಿತ್ತು ಎಂದರು.
ಕುಟುಂಬದವರನ್ನು ಕಳೆದುಕೊಂಡ ನೋವು ಸಹಿಸಲು ಆಗುತ್ತಿಲ್ಲ. ನನ್ನ ತಾಯಿ ಸೇರಿ ಇಬ್ಬರು ಮಾತ್ರ ಬದುಕುಳಿದಿದ್ದಾರೆ. ನನ್ನ ತಾಯಿಯನ್ನು ದೇವರೇ ರಕ್ಷಿಸಿದ್ದಾರೆ. ಕಪ್ಪೆಚಿಪ್ಪು ಆಯ್ದುಕೊಳ್ಳುವಲ್ಲಿ ತಾಯಿಗೆ ಅಪಾರ ಅನುಭವ ಇತ್ತು. 14 ಜನರಲ್ಲಿ ನನ್ನ ತಾಯಿಯೇ ಹೆಚ್ಚು ವಯಸ್ಸಿನವರು. ಅವರು ಬದುಕಿ ಬಂದಿರುವುದು ಪವಾಡ. 14 ಜನರಲ್ಲಿ 13 ಜನ ನನ್ನ ಕುಟುಂಬದವರೇ. ನಮ್ಮ ಕುಟುಂಬದ 10 ಜನರನ್ನು ಕಳೆದುಕೊಂಡಿದ್ದೇವೆ ಎಂದರು.
ಪರಿಸರದ ಮತ್ತೋರ್ವ ವ್ಯಕ್ತಿಯೂ ಸಾವನ್ನಪ್ಪಿದ್ದಾರೆ. ತಾಯಿಯರನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ದುರಂತದಿಂದ ಇಡೀ ಕುಟುಂಬ ಸಂಪೂರ್ಣ ಅನಾಥವಾಗಿದೆ. ತಾಯಿಯನ್ನು ಕಳೆದುಕೊಂಡ ಆ ಮಕ್ಕಳನ್ನು ನೋಡುವುದೇ ಬಹಳಷ್ಟು ನೋವಾಗುತ್ತಿದೆ. ಇಷ್ಟು ಕಷ್ಟ ಜೀವನ ನಮಗೆ ಯಾಕೆ ಬಂದಿದೆ ಅನ್ನೋದು ಅರ್ಥವಾಗುತ್ತಿಲ್ಲ ಎಂದರು.

