ಉಡುಪಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ಅರಬ್ಬಿ ಸಮುದ್ರದ ಪ್ರಕ್ಷುಬ್ಧಗೊಂಡು ಅಬ್ಬರ ಹೆಚ್ಚಾಗುತ್ತದೆ. ಅಪಾಯಕಾರಿ ಅಲೆಗಳು ದಡವನ್ನು ಅಪ್ಪಳಿಸುತ್ತದೆ. ಅಪಾಯವನ್ನು ತಪ್ಪಿಸಲು ಸಮುದ್ರ ಇಳಿಯುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಡೆಬೇಲಿ ಹಾಕಲಾಗಿದೆ. ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯುವುದನ್ನು ನಿಷೇಧಿಸಲಾಗಿದೆ. ಸದ್ಯ ಬರುವ ಸಮುದ್ರ ಅಲೆಗಳ ಜೊತೆಗೆ ಕಾಲ ಕಳೆಯುವುದಕ್ಕೆ ಬರುವ ಪ್ರವಾಸಿಗರಿಗೆ ನಿರಾಸೆಯೇ ಸ್ವಾಗತಿಸುತ್ತಿದೆ.

ಉಡುಪಿ ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧಿ. ಉಡುಪಿ ಪ್ರವಾಸಿ ತಾಣವಾದ ಮಲ್ಪೆ ಬೀಚ್‌ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಸದ್ಯ ಆಗಮಿಸುವ ಪ್ರವಾಸಿಗರಿಗೆ ನಿರಾಸೆ ಕಾದಿದೆ. ಮಳೆಗಾಲದಲ್ಲಿ ಸಮುದ್ರದ ಕ್ಷಣದಿಂದ ಕ್ಷಣಕ್ಕೆ ತನ್ನ ಸ್ವಭಾವ ಬದಲಾಯಿಸುತ್ತದೆ.ಗಾಳಿ ಒತ್ತಡ ಹೆಚ್ಚಾದಂತೆ ಅಲೆಗಳ ರೌದ್ರನರ್ತನ ಆರಂಭವಾಗುತ್ತದೆ. ಪ್ರಕ್ಷುಬ್ಧ ಗೊಂಡ ಸಮುದ್ರದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿರುವ ಕಾರಣಕ್ಕೆ ಜಿಲ್ಲಾಡಳಿತ ಸಮುದ್ರ ಇಳಿಯುವುದಕ್ಕೆ ನಿರ್ಬಂಧ ವಿಧಿಸುತ್ತದೆ.

ಸಮುದ್ರ ತೀರದ ಬಳಿ ಸುಮಾರು 1 ಕಿಲೋಮೀಟರ್ ಉದ್ದಕ್ಕೂ 10 ಅಡಿ ಎತ್ತರದ ತಡೆಬೇಲಿ ಅಳವಡಿಸಿದೆ.ಫಿಶ್ ನೆಟ್ ಬಳಸಿ ಸುಮಾರು 10 ಅಡಿ ಎತ್ತರದ ತಡೆಬೇಲಿ ನಿರ್ಮಿಸಲಾಗಿದೆ. ಸಮುದ್ರದ ದಂಡೆಯುದ್ದಕ್ಕೂ ಅಪಾಯ ಸೂಚಕ ಬಾವುಟಗಳನ್ನು ಹಾಕಲಾಗಿದೆ. ಎಚ್ಚರಿಕೆ ಫಲಕಗಳನ್ನೂ ಅಳವಡಿಸಲಾಗಿದೆ. ಸೆಪ್ಟೆಂಬರ್ 15ರ ತನಕ ಪ್ರವಾಸಿಗರಿಗೆ ಮಲ್ಪೆ ಬೀಚ್ ಸಮುದ್ರ ಕ್ಕೆ ಇಳಿಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ತಡೆಬೇಲಿ ಹಾಕುವುದ ಜೊತೆಗೆ ಟ್ಟೂರಿಸ್ಟ್ ಪೊಲೀಸ್, ಲೈಫ್ ಗಾರ್ಡ್ ಗಳು,ಪೊಲೀಸ್ ಹೋಮ್ ಗಾರ್ಡ್ ಕೂಡ ಪ್ರವಾಸಿಗರು ಸಮುದ್ರ ಕ್ಕೆ ಇಳಿಯದಂತೆ ಕಣ್ಗಾವಲು ಇಟ್ಟಿದ್ದಾರೆ.

ಪ್ರತಿನಿತ್ಯ ಲಕ್ಷಾಂತರ ಪ್ರವಾಸಿಗರು ಮಲ್ಪೆ ಕಡೆ ಮುಖ ಮಾಡುತ್ತಾರೆ.ಸದ್ಯ ಮಲ್ಪೆಗೆ ಬರುವ ಪ್ರವಾಸಿಗರು ನಿರಾಶೆ ಯಿಂದ ಹಿಂತಿರುಗುವ ಂತಾಗಿದೆ.ಸಮುದ್ರ ತೀರದಲ್ಲಿ ನಿಂತು ಅರಬ್ಬಿ ಸಮುದ್ರದ ರುದ್ರ ರಮಣೀಯ ಸೌಂದರ್ಯ ವನ್ನು ಆಸ್ವಾಧಿಸುವ ಅವಕಾಶ ಇದ್ರು ಸಮುದ್ರಕ್ಕೆ ಇಳಿಯೊಕೆ ಅವಕಾಶ ಇಲ್ಲ ಎಂದು ನಿರಾಸೆ ಯೊಂದಿಗೆ ಬಂದ ದಾರಿ ಗೆ ಸುಂಕವಿಲ್ಲ ಎನ್ನುವಂತೆ ವಾಪಸ್ ಹೋಗೊದು ಅನಿವಾರ್ಯ. ಮಲ್ಪೆ ಬೀಚ್ ಬರುವ ಪ್ರವಾಸಿಗರುಮೂರು ತಿಂಗಳುಗಳ ಬಿಟ್ಟು ಟೂರ್ ಪ್ಲಾನ್ ಮಾಡಿದ್ರೆ ಸಮುದ್ರ ಅಲೆಗಳ ಜೊತೆ ಆಟವಾಡುವುದಕ್ಕೆ ಅವಕಾಶ ಸಿಗಲಿದೆ.

ಒಟ್ಟಿನಲ್ಲಿ ಪ್ರವಾಸಿಗರ ಸುರಕ್ಷತೆಯೇ ಮೊದಲ ಆದ್ಯತೆ ಯ ಉದ್ದೇಶದಿಂದ ಜಿಲ್ಲಾಡಳಿತದ ಕ್ರಮ ಅನಿವಾರ್ಯ ವಾಗಿದೆ.ಅದ್ರೆ ಸದ್ಯ ಟೂರ್ ಪ್ಲಾನ್ ಮಾಡಿ ಉಡುಪಿ ಬಂದ ಮಂದಿ ಅರಬ್ಬೀ ಸಮುದ್ರ ಜೊತೆಗೆ ನೀರಾ ಆಟವಾಡಲು ಅವಕಾಶ ಸಿಗದೆ ನಿರಾಸೆ ಯೊಂದಿಗೆ ವಾಪಸ್ ತಮ್ಮ ಊರಿನ ಕಡೆಗೆ ಮುಖಮಾಡದೆ ಅನ್ಯಮಾರ್ಗವಿಲ್ಲ.

View this post on Instagram

A post shared by News Karnataka (@newskarnataka)