ಉಡುಪಿ: ನಗರದ ಕರಾವಳಿ ಬೈಪಾಸ್ ಬಳಿ ಬೇಕರಿ ಮಾಲಕನಿಗೆ ಚಾಕು ತೋರಿಸಿ ಹಲ್ಲೆ ನಡೆಸಲಾಗಿದೆ. ಪೂಜಾ ಬೇಕರಿ ಮಾಲಕ ಮುರಳಿಧರ ಹಲ್ಲೆಗೆ ಒಳಗಾದವರು. ಪಕ್ಕದ ಕೃಷ್ಣ ಬೇಕರಿ ಮಾಲಕ ಅಶೋಕ್ ಹಲ್ಲೆ ಮಾಡಿದ ಆರೋಪಿ. ಸುಮಾರು 20 ವರ್ಷಗಳಿಂದ ಕರಾವಳಿ ಬೈಪಾಸ್ ಬಳಿ ಬೇಕರಿ ಉದ್ಯಮ ನಡೆಸುತ್ತಿರುವ ಮುರಳಿಧರ. ಕಳೆದ ಒಂದು ವರ್ಷದ ಹಿಂದೆ ಅಷ್ಟೇ, ಬೇಕರಿ ಅಂಗಡಿಯನ್ನು ಆರೋಪಿ ಅಶೋಕ ತೆರೆದಿದ್ದರು.

ಏಕಾಏಕಿ ಅಂಗಡಿಯ ಮುಂದೆ ಬಂದು ಅಶೋಕ ಗಲಾಟೆ ಆರಂಭಿಸಿದ್ದಾರೆ. ನನ್ನ ವ್ಯಾಪಾರಕ್ಕೆ ಸಮಸ್ಯೆ ಮಾಡುತ್ತಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಆರೋಪಿ ನಿಂದಿಸಿದ್ದಾರೆ. ನಿನ್ನ ವ್ಯಾಪಾರಕ್ಕೆ ನಾನು ಅಡ್ಡಿಯಾಗಿಲ್ಲ ಎಂದು ಮುರಳಿಧರ ಸುಮ್ಮನಾದರು.

ಇದರಿಂದ ಕೋಪಗೊಂಡು ಅಂಗಡಿಯ ಮುಂಭಾಗದ ಸಾಮಾನುಗಳನ್ನು ಆರೋಪಿ ಎಸೆದಿದ್ದಾರೆ. ಅಂಗಡಿ ಒಳಗೆ ನುಗ್ಗಿ ಬೇಕರಿ ಮಾಲಕನ ಕಾಲರ್ ಹಿಡಿದು ಚಾಕು ತೋರಿಸಿ ಆರೋಪಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಕೃತ್ಯ ಪ್ರತ್ಯಕ್ಷ ದರ್ಶಿವೋರ್ವರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.