ಉಡುಪಿ: ನಂದಿನಿ ಹಾಲಿನ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಿಕ್ಷಾವೊಂದು ಪಲ್ಟಿಯಾದ ಘಟನೆ ಉಡುಪಿ ಬಲಾಯಿ ಪಾದೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಅದೃಷ್ಟವಶಾತ್ ಆಟೋ ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಹೆದ್ದಾರಿಗೆ ದಿಢೀರ್ ಆಗಿ ನುಗ್ಗಿ ಬಂದ ಆಟೋ ರಿಕ್ಷಾವನ್ನು ಗಮನಿಸಿದ ಲಾರಿ ಚಾಲಕ ಬದಿಗೆ ಸರಿದ ಪರಿಣಾಮ ಭೀಕರ ಅಪಘಾತವೊಂದು ಕೂದಲೆಳೆಯಂತರದಲ್ಲಿ ತಪ್ಪಿದಂತಾಗಿದೆ. ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಆಟೋ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

