ಉಡುಪಿ: ನಗರದ ಹೊರವಲಯದ ಏಜೀಸ್ ಆಟೋ ಗ್ಯಾಸ್ ಪಂಪ್‌ನಲ್ಲಿ ಎಲ್‌ಪಿಜಿ ದರ ಏಕಾಏಕಿ 18 ರೂಪಾಯಿ ಏರಿಕೆಯಾಗಿರುವುದು ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಇತರ ಪಂಪ್‌ಗಳಲ್ಲಿ ಸಾಮಾನ್ಯ ದರವಿದ್ದರೂ, ಇಲ್ಲಿ ಮಾತ್ರ ನಿನ್ನೆ ಮಧ್ಯಾಹ್ನದ ಬಳಿಕ ದರ ಹೆಚ್ಚಿಸಲಾಗಿದೆ. ಪರಿಸ್ಥಿತಿಯ ಲಾಭ ಪಡೆಯಲು ಮಾಲೀಕರು ದರ ಏರಿಕೆ ಮಾಡಿದ್ದಾರೆ ಎಂದು ಚಾಲಕರು ಆರೋಪಿಸಿದ್ದು, ದರ ಇಳಿಕೆಗೆ ಒತ್ತಾಯಿಸಿ ಪಂಪ್ ಎದುರು ಸಾಲು ನಿಂತು ಪ್ರತಿಭಟನಾತ್ಮಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ಸುತ್ತೋಲೆ ಬಂದಿದೆ ಎಂದು ಪಂಪ್ ಮಾಲೀಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.

