ಉಡುಪಿ: ಸಾಧನ, ಸ್ನೇಹ, ಸಂಗಮ, ಐಕ್ಯ, ಪ್ರಗತಿ ಸ್ತ್ರೀಶಕ್ತಿ ಸಂಘಗಳು ಹಾಗೂ ಅಂಗನವಾಡಿ ಕೇಂದ್ರ ಗರಡಿಮಜಲು ತೆಂಕನಿಡಿಯೂರು ಇದರ ಆಶ್ರಯದಲ್ಲಿ ಸ್ತ್ರೀಶಕ್ತಿ ಸಂಘಗಳ 25ನೇ ವಾರ್ಷಿಕೋತ್ಸವದ ಅಂಗವಾಗಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಗರಡಿಮಜಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಉದ್ಯಮಿ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ ಮಾತನಾಡಿ, ಪ್ರತಿಯೊಬ್ಬ ಪುರುಷನ ಸಾಧನೆಯ ಹಿಂದೆ ಮಹಿಳೆಯ ಪಾತ್ರ ಇರುತ್ತದೆ. ಸಮಾಜ, ಕುಟುಂಬದ ಏಳಿಗೆಯಲ್ಲಿ ಮಹಿಳೆಯರ ಕೊಡುಗೆ ಅಪಾರ ಎಂದರು.
ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಮನೆಯ ಜವಾಬ್ದಾರಿ ನಿಭಾಯಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ. ಉಡುಪಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ದೊಡ್ಡದಿದೆ ಎಂದರು.
ತೆಕ್ಕರೆದ ತಲ್ಲಿ, ಚಿಲ್ಮಿದ ಅಡ್ಡೆ, ಉಪ್ಪಡ್, ಅರಿತ ಉಂಡೆ, ಕ್ಯಾನೆದ ಪುಂಡಿ, ಗುಜ್ಜದ ಮುಳ್ಕ, ಖಾರದ ಹಪ್ಪಳ, ಗುಂಡ, ಪತ್ರೋಡೆ, ಟೀಪೆ ಕಡಿ, ತೇವುದ ಬಜ್ಜಿ, ಉಪ್ಪಡ್ ಪಚ್ಚಿರ್, ಗುಜ್ಜದ ಕೈಪು, ತೇವುದ ಬಜ್ಜಿ, ತಿಮರೆದ ಬಜ್ಜಿ, ಮಣೋಲಿ ಕಡ್ಲೆ, ಉರ್ಪೆಲ್ ಅರಿತ ನುಪ್ಪು, ತೊಜಂಕ್ ಬೋಳೆ, ಕುಡುತ ಸಾರ್ ಮೊದಲಾದ ವಿವಿಧ ಆಟಿಯ ವಿಶೇಷ ಖಾದ್ಯಗಳನ್ನು ಉಣಬಡಿಸಲಾಯಿತು.

