ಉಡುಪಿ: ಯಕ್ಷಗಾನದ ನಡುವಲ್ಲಿ ಪ್ರೇಕ್ಷಕರಿಗೆ ಕಲಾವಿದ ಕ್ಲಾಸ್ ತೆಗೆದುಕೊಂಡ ಘಟನೆ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರಸಂಗದಲ್ಲಿ ಕುಂದಾಪುರದ ಹೆನ್ನಾಬೈಲಿನಲ್ಲಿ ನಡೆಯುತ್ತಿದ್ದ ಪ್ರದರ್ಶನದಲ್ಲಿ ನಡೆದಿದೆ.

ಯಕ್ಷಗಾನ ಭಾಗವತಿಕೆ ವೇಳೆ, ಪ್ರೇಕ್ಷಕ ಶಿಳ್ಳೆ ಹಾಕಿದ್ದು, ಪ್ರೇಕ್ಷಕರ ವರ್ತನೆಗೆ ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಉಜಿರೆ ಕಿಡಿಕಾರಿದ್ದಾರೆ. ವೇಷ ಧರಿಸಿ ಪಾಠ ಮಾಡಿದ್ದಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದೆ. ಕಲಾವಿದರು ಮಾಡಿದ್ದು ಸರೀನಾ ತಪ್ಪಾ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಅತ್ಯಂತ ಜನಪ್ರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಪರ ವಿರೋಧ ಚರ್ಚೆ ನಡೆಯುತ್ತಿದೆ. ಯಕ್ಷಗಾನ ಪ್ರದರ್ಶನ ವೇಳೆ ಶಿಳ್ಳೆ ಹಾಕಿ ಸೌಜನ್ಯ ಮೀರಬೇಡಿ ಎಂದು ತರಾಟೆ ತೆಗೆದುಕೊಂಡಿದ್ದಾರೆ. ನಿಮ್ಮಂಥ ಪ್ರೇಕ್ಷಕರ ಅಗತ್ಯ ಇಲ್ಲ ಎಂದು ಗರಂ ಆಗಿದ್ದಾರೆ. ಪಾತ್ರಧಾರಿಯಾಗಿ ಕಲಾವಿದ ಮಾಡಿದ್ದು ತಪ್ಪು ಎಂಬ ಅಭಿಪ್ರಾಯ ಕೇಳಿಬಂದಿದೆ. ಯಕ್ಷಗಾನ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾದ ವಿಡಿಯೋ ಎಲ್ಲಡೆ ವೈರಲ್‌ ಆಗಿದೆ.

View this post on Instagram

A post shared by News Karnataka (@newskarnataka)