ಉಡುಪಿ: ಉಡುಪಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಗರದ ಹಲವು ರಸ್ತೆಗಳು ಹೊಂಡಗಳಿದ್ದ ತುಂಬಿಹೋಗಿವೆ. ಭಾರಿ ಮಳೆಗೆ ರಸ್ತೆ ಹೊಂಡಗಳಲ್ಲಿ ನೀರು ತುಂಬಿದ್ದು, ಸವಾರರು ತೀವ್ರ ಕಷ್ಟಪಡುವಂತಾಗಿದೆ.

ಪೆರಂಪಳ್ಳಿಯ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಮೀಪ ರಸ್ತೆಯಲ್ಲಿ ಭಾರಿ ಹೊಂಡಗಳು ಬಿದ್ದಿವೆ.ನಿತ್ಯ ಮಣಿಪಾಲಕ್ಕೆ ಹೋಗುವವರು ಮತ್ತು ಮಣಿಪಾಲದಿಂದ ಬರುವವರಿಗೆ ಈ ರಸ್ತೆಯ ಹೊಂಡಗಳು ಸವಾಲಾಗಿ ಪರಿಣಮಿಸಿವೆ.

ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಸವಾರರು ಹಿಡಿಶಾಪ ಹಾಕುತ್ತಲೇ ಸವಾರಿ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ಬಳಿ ಈ ಸಮಸ್ಯೆ ಹೇಳಿಕೊಂಡರೆ ಮಳೆಗಾಲ ಮುಗಿದ ಮೇಲೆ ರಿಪೇರಿ ಎಂಬ ಉತ್ತರ ಬರುತ್ತದೆ‌. ಕರಾವಳಿಯಲ್ಲಿ ಸಪ್ಟೆಂಬರ್ ಅಕ್ಟೋಬರ್ ತನಕ ಮಳೆ ಇರಲಿದ್ದು, ಅಲ್ಲಿಯ ತನಕ ವಾಹನ ಸವಾರರು ಇದನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.