ಉಡುಪಿ: ಗಿಲ್‌ನೆಟ್ ಮೀನುಗಾರರ ಬಲೆಗೆ ಸ್ಥಳೀಯವಾಗಿ ಕರೆಯುವ ಬೃಹತ್ ಗಾತ್ರದ ಮಡಲು ಮೀನು ಸಿಕ್ಕಿದೆ.

ಬೈಂದೂರು ತಾಲೂಕಿನ ಉಪ್ಪುಂದ ಎಂಬಲ್ಲಿ ಗಿಲ್‌ನೆಟ್ ಮೀನುಗಾರರ ಬಲೆಗೆ ಬಿದ್ದ ಈ ಮೀನನ್ನು ಮಲ್ಪೆ ಬಂದರಿಗೆ ತರಲಾಗಿದೆ. ಕೇರಳದಲ್ಲಿ ಕಟ್ಟಕಂಬ ಎಂದು ಕರೆಯಲ್ಪಡುವ ಈ ಮೀನು ಸುಮಾರು 13 ಅಡಿ ಉದ್ದದ ಈ ಮೀನು 350 ಕೆಜಿ ತೂಕವನ್ನು ಹೊಂದಿದೆ.

ಈ ಮೀನು ಕೆ.ಜಿ.ಗೆ 70 ರೂ.ನಂತೆ ಕೇರಳದ ಮೀನು ವ್ಯಾಪಾರಸ್ಥರಿಗೆ ಮಾರಾಟವಾಗಿದೆ. ಮಲೆನಾಡು ಮತ್ತು ಕೇರಳದಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದೆ ಎಂದು ಎಸ್‌ಕೆಆರ್‌ಸಿಬಿ ಪಾರ್ಟಿಯ ಸುರೇಶ್ ಹೇಳುತ್ತಾರೆ.