ಉಡುಪಿ: ಕುಡಿದ ಮತ್ತಿನಲ್ಲಿ ಗೆಳೆಯರ ಗುಂಪು ಮಧ್ಯೆ ಜಗಳ ನಡೆದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಬಾರ್ ಹೊರ ಭಾಗದಲ್ಲಿ ಮದ್ಯದ ಅಮಲು ಏರಿ ಗೆಳೆಯರ ಗುಂಪಿನೊಳಗೆ ಜೋರು ಜಗಳವಾಗಿದೆ. ಕ್ಷುಲ್ಲಕ ಕಾರಣಕ್ಕೆ ತಳ್ಳಾಟವಾಗಿದೆ. ಮಣಿಪಾಲ ಪೊಲೀಸರು ಗೆಳೆಯರ ಜಗಳವನ್ನು ಬಿಡಿಸುವುದರಲ್ಲಿ ಸುಸ್ತು ಬಿದ್ದು ಹೋದರು.
ಕ್ಷುಲ್ಲಕ ಕಾರಣಕ್ಕೆ ಶುರುವಾದ ಮಾತು, ಚಕಮಕಿಗೆ ಕಾರಣವಾಯ್ತು. ಪೊಲೀಸರು ಲಾಟಿ ಎತ್ತುವ ಮೂಲಕ ಜಗಳ ಕೊನೆಯಾಯಿತು. ಜೊತೆಗೆ ಬಂದು ಕೂತು ಕುಡಿದವರು ಕಾರು ಬೈಕು ಆಟೋ ಹತ್ತಿ ಬೇರೆ ಬೇರೆ ಗುಂಪುಗಳಾಗಿ ಸ್ಥಳದಿಂದ ತೆರಳಿದರು.

