ತುಮಕೂರು: ದೇವರ ಕಾರ್ಯಕ್ಕೆ ಮಾಡಿದ್ದ ಊಟ ಸೇವನೆ ಮಾಡಿದವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ.ವಾಂತಿ ಬೇಧಿಯಿಂದ ಓರ್ವ ಮಹಿಳೆ ಮೃತಪಟ್ಟರೆ, 6 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಟಮ್ಮ(45) ಮೃತ ದುರ್ದೈವಿ.

ಶನಿವಾರ ಗ್ರಾಮದಲ್ಲಿ ಮುತ್ತುರಾಯಸ್ವಾಮಿ, ಕರಿಯಮ್ಮ ದೇವರಿಗೆ ಹರಿಸೇವೆ ಮಾಡಲಾಗಿತ್ತು.ಇಡೀ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಮಾಡಿದ ಬಳಿಕ ಗ್ರಾಮದ ಕೆಲವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ. ಶನಿವಾರ ಬುಳ್ಳುಸಂದ್ರ ಗ್ರಾಮದಲ್ಲಿ ವೃದ್ದೆ ತಿಮ್ಮಕ್ಕ (85) ಸಾವನ್ನಪ್ಪಿದ್ದರು. ಬಳಿಕ ಭಾನುವಾರ ವೃದ್ದೆ ಗಿರಿಯಮ್ಮ(90) ಮೃತಪಟ್ಟಿದ್ದಾರೆ.